ಅಸಂಸದೀಯ ಹೇಳಿಕೆ ಖಂಡನೀಯ

ಮೈಸೂರು:ಮಾ:29: ಪ್ರತಿಭಟನೆ ನೆಪದಲ್ಲಿ ಕಲ್ಲು ತೂರಾಟ ನಡೆಸಿದವರನು ಕೂಡಲೆ ಬಂಧಿಸಬೇಕೆಂದು ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ವಿರುದ್ಧ ಅಸಂಸದೀಯ ಪದ ಬಳಕೆ ಮಾಡಿದ ರಮೇಶ್ ಜಾರಕಿಹೊಳಿ ವರ್ತನೆಯನ್ನು ತೀವ್ರವಾಗಿ ಖಂಡಿಸಿತಲ್ಲದೆ ಬೆಳಗಾವಿಯಲ್ಲಿ ಡಿಕೆಶಿ ಅವರು ಬಂದ ವೇಳೆ ಪ್ರತಿಭಟನೆ ನೆಪದಲ್ಲಿ ಕಲ್ಲು ತೂರಾಟ ನಡೆಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು. ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಡಿಕೆಶಿ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ .ಅಲ್ಲದೆ ಪ್ರಕರಣದಲ್ಲಿ ಆರೋಪ- ಪ್ರತ್ಯಾರೋಪ ಸಹಜ .ಆದರೆ ರಮೇಶ್ ಅವರು ಡಿಕೆಶಿ ವಿರುದ್ಧ ಬಳಕೆ ಮಾಡಿದ ಪದಗಳ ಯೋಗ್ಯವಲ್ಲ .ಅವರಿಗೆ ಅನ್ಯಾಯವಾಗಿದ್ದಲ್ಲಿ ಕೋರ್ಟ್ ಇದೆ .ಸರ್ಕಾರ ಇದೆ. ಪೆÇೀಲಿಸ್ ಇದೆ . ತನಿಖೆ ಮಾಡಿಸಲಿ ,ಅದನ್ನು ಬಿಟ್ಟು ಸಂತ್ರಸ್ತೆಯ ಹೇಳಿಕೆಗೂ ಮುಂಚೆ ಡಿಕೆಶಿ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಅವಹೇಳನ ಮಾಡಿದ ಖಂಡನೀಯ ಎಂದರು.
ಚುನಾವಣೆ ನಿಮಿತ್ತ ಬೆಳಗಾವಿಗೆ ತೆರಳಿದ ಡಿಕೆಶಿ ಅವರ ಕಾರಿಗೆ ಚಪ್ಪಲಿ ತೂರಾಟ ನಡೆಸಿದವರು ಹಾಗೂ ಪ್ರತಿಭಟನೆ ಹಿಂದೆ ಇರುವ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.