ಅಸಂತಾಪುರ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ

ವಿಜಯಪುರ,ಫೆ.27: ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಅಸಂತಾಪುರ ಗ್ರಾಮದಲ್ಲಿ ರೇಣುಕಾ ದೇವಿ ಯಲ್ಲಮ್ಮನ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು.
ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೂರ್ತಿ ಮೆರವಣಿಗೆ ನಡೆಯಿತು. ದೇವಸ್ಥಾನದಿಂದ ಗಂಗಾಸ್ಥಳಕ್ಕೆ ತೆರಳಿ ಅಲ್ಲಿಂದ ಡೊಳ್ಳು, ಹಲಿಗೆ, ವಾದ್ಯ ಮೇಳಗಳೊಂದಿಗೆ ಜೋಗತಿಯರ ಕುಣಿತದಿಂದ ಮರಳಿ ಪಲ್ಲಕ್ಕಿ ದೇವಸ್ಥಾನಕ್ಕೆ ಬಂದು ತಲುಪಿತು. ಇಡೀ ರಾತ್ರಿ ಡೊಳ್ಳಿನ ಗಾಯನ ಸಂಘಗಳು, ಜಾನಪದ ಕಲಾತಂಡ ಮೇಳಗಳು ಕಲಾ ಪ್ರದರ್ಶನ ನೀಡಿದವು. ಅಸಂತಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹಾಗೂ ವಿವಿಧ ಮಂಡಳಿಗಳು ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಜಾತ್ರಾ ಮಂಡಳಿಯ ಗುಂಡಯ್ಯ ಹಿರೇಮಠ, ಸಾಹೇಬಗೌಡ ಬಿರಾದಾರ, ಈರಯ್ಯ ಮಠ, ಸುಭಾಷ ದೇಸಾಯಿ, ಡಿ.ವಾಯ್. ಪಾಟೀಲ, ರುದ್ರಗೌಡ ದೇಸಾಯಿ, ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಂಗಾರೆಮ್ಮ ದೊಡಮನಿ, ಹನಮಂತ್ರಾಯಗೌಡ, ದೌ¯ಸಾಬ್ ಕೆಸರಟ್ಟಿ, ಈರಘಂಟೆಪ್ಪ ಛಲವಾದಿ, ಚಂದ್ರಶೇಖರ ಮಾದರ, ಶಾಂತಪ್ಪ ಬಡಿಗೇರ, ಪಂಚಾಯತಿ ಸದಸ್ಯ ದಾವಲ್ ಕೆಸರೆಟ್ಟಿ, ಚೆನ್ನಮ್ಮ ನಾಗರೆಡ್ಡಿ ಉಪಸ್ಥಿತರಿದ್ದರು.