ಅಸಂಘಟಿತ ವಲಯದ ಕ್ಷೌರಿಕರಿಗೆ ಲೇಬರ್ಸ (ಸ್ಮಾರ್ಟ) ಕಾರ್ಡ್ ವಿತರಣೆ

ಕಲಬುರಗಿ:ಮೇ.2: ಚಿತ್ತಾಪೂರ ತಾಲೂಕಿನ ನಾಲವಾರದ ಕೋರಿಸಿದ್ದೇಶ್ವರ ಮಠದ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾರ್ಮಿಕ ದಿನಾಚರಣೆ ಪ್ರಯುಕ್ತ ಕೋವಿಡ್-19 ನಿಯಮ ಪಾಲನೆ ಮಾಡುವ ಮೂಲಕ ಹಡಪದ (ಕ್ಷೌರಿಕ) ಸಮಾಜದ ಕಾಯಕ ಜೀವಿಗಳಿಗೆ ಕಾರ್ಮಿಕ ಇಲಾಖೆ ವತಿಯಿಂದ ಅಸಂಘಟಿತ ವಲಯದ ಕ್ಷೌರಿಕರಿಗೆ ಲೇಬರ್ಸ (ಸ್ಮಾರ್ಟ) ಕಾರ್ಡ್‍ಗಳನ್ನು ಕಲ್ಯಾಣ ಕರ್ನಾಟಕ ಹಡಪದ (ಕ್ಷೌರಿಕ) ಸಮಾಜದ ವಿಭಾಗೀಯ ಅಧ್ಯಕ್ಷ ಈರಣ್ಣಾ ಸಿ.ಹಡಪದ ಸಣ್ಣೂರ ಅವರು ವಿತರಣೆ ಮಾಡಿದರು.

ಜಿಲ್ಲಾ ಹಡಪದ ಸಮಾಜ ಮತ್ತು ಜಿಲ್ಲಾ ಯುವ ಕಮೀಟಿ ಯೂತ್ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ.ಹಡಪದ ಸುಗೂರ (ಎನ್), ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ (ಎನ್), ಬಸವರಾಜ ಹಡಪದ ಹಳ್ಳಿ, ಮಲ್ಲಿಕಾರ್ಜುನ ಬಿ.ಹಡಪದ ಸುಗೂರ(ಎನ್), ಶಹಾಬಾದ ನಗರ ಘಟಕದ ಅಧ್ಯಕ್ಷ ಅನಿಲ ಹಳೆಶಹಾಬಾದ, ಭಾಗಣ್ಣಾ ಹಡಪದ, ಬಸ್ಸು ಹಡಪದ ಭಂಕೂರ, ಸಿದ್ದು ಹಡಪದ ಮಾರಡಗಿ, ಶೇಖಣ್ಣಾ ಹಡಪದ ದಂಡಗುಂಡ, ಸಿದ್ರಾಮ ಹಡಪದ ಯಾಗಾಪೂರ, ಅನಿಲ ಹಡಪದ ಮಾರಡಗಿ, ಸಿದ್ದು ಹಡಪದ ನಾಲವಾರ, ಶಿವುಕುಮಾರ ಹಡಪದ ಕೊಳ್ಳಿ, ವಿಶ್ವನಾಥ ಹಡಪದ ಸುಗೂರ್, ಮಲ್ಲಪ್ಪ ಮಡಿವಾಳ ನಾಲವಾರ, ದತ್ತು ಸವಿತಾ ಸಮಾಜ ನಾಲವಾರ, ಅಶೋಕ ಹಡಪದ ಸುಗೂರ (ಎನ್), ಶಂಕರ ಹಡಪದ ನಾಲವಾರ, ರಾಜು ಹಡಪದ ಹಾಗೂ ಸಮಾಜದ ಮುಂಖಡರು ಭಾಗವಹಿಸಿದ್ದರು.