ಅಷ್ಟೂರ ಗ್ರಾಪಂ ನಲ್ಲಿ ಆರೋಗ್ಯ ಶಿಬಿರ ಮತ್ತು ರೋಜಗಾರ್ ದಿವಸ ಆಚರಣೆ

ಬೀದರ್:ಮೇ.25:ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಗೌತಮ್ ಅರಳಿ ಕಾರ್ಯನಿರ್ವಾಹಕ ಅಧಿಕಾರಿ ಅಧಿಕಾರಿ ಹೇಳಿದರು.
ತಾಲೂಕಿನ ಅಷ್ಟೂರ ಗ್ರಾಮ ಪಂಚಾಯತಿ ನರೇಗಾ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿಕಾರರಿಗಾಗಿ ಹಮ್ಮಿಕೊಂಡ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು ನಿಮಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನೀವು ಕೆಲಸ ಮಾಡುವ ಸ್ಥಳಕ್ಕೆ ಆಗಮಿಸಿ ಆರೋಗ್ಯ ತಪಾಸಣೆ ಮಾಡುತ್ತಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಂತರ ಮಾತನಾಡದ ಲಕ್ಷ್ಮಿ ಬಿರಾದಾರ ಸಹಾಯಕ ನಿರ್ದೇಶಕರು ನೀವು ಇರುವ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ಇಲಾಖೆಯ ವೈದ್ಯರು ಆರೋಗ್ಯ ತಪಾಸಣೆ ಮಾಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಿ. ನುರಿತ ವೈದ್ಯರು ನಿಮ್ಮ ಬಿಪಿ, ಶುಗರ ತಪಾಸಣೆ ಮಾಡುತ್ತಿದ್ದಾರೆ. ಆದರಿಂದ ಪ್ರತಿಯೊಬ್ಬರೂ ಈ ಆರೋಗ್ಯ ಶಿಬಿರದ ಸದುಪಯೋಗ ಪಡೆದು ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ ಎಂದು ಸಲಹೆ ನೀಡಿದ್ದರು.
ನಂತರ ಮಾತನಾಡ ವಿಜಯಕುಮಾರ ಪಂಚಾಯತ ಅಭಿವೃದ್ಧಿ ಅಧಿಕಾರಿ ತಾಲೂಕಿನಲ್ಲಿ ಅತಿ ಹೆಚ್ಚು ಮಾನವ ದಿನಗಳ ಸೃಜನೆ ನಮ್ಮ ಪಂಚಾಯತ ನಲ್ಲಿ ಆಗಿರುವುದು ಹೆಮ್ಮಯ ಸಂಗತಿ ಇದಕ್ಕೆಲ್ಲ ನಿಮ್ಮ ಶ್ರಮ ಮತ್ತು ಸಹಕಾರ ತುಂಬಾ ಇತ್ತು. ಮುಂದಿನ ವಾರ ನಾನು ಪಂಚಾಯತ ಅಭಿವೃದ್ಧಿ ಅಧಿಕಾರಿ ಹುದ್ದೆಯಿಂದ ನೃವತ್ತಿ ಆಗುತ್ತಿದ್ದು, ಮುಂದೆಯೂ ನೀವೆಲ್ಲ ಇದೆ ರೀತಿಯಾಗಿ ಕೆಲಸ ನಿರ್ವಹಿಸಿಕೊಂಡು ಹೋಗಬೇಕು ಎಂದು ತಿಳಿ ಹೇಳಿದರು.
ಈ ಸಂಧರ್ಭದಲ್ಲಿ ವಿಜಯ ಕುಮಾರ ಪಾಟೀಲ ಪಂಚಾಯತ ಅಭಿವೃದ್ಧಿ ಅಧಿಕಾರಿ,ರೇಣುಕಾ ರಾಹುಲ್ ಅಧ್ಯಕ್ಷರು, ಸದಸ್ಯರಾದ ಸಂಜು ಕುಮಾರ ಭೀಮಣ್ಣ, ಕುಶಾಲ್ ರಾವ್ ಶರಣಪ್ಪ, ಜೋಸೆಫಿನ್ ( ಸಿ ಎಚ್ ಓ) ರಜನಿಕಾಂತ ಶರ್ಮಾ ಜಿಲ್ಲಾ ಐ ಇ ಸಿ ಸಂಯೋಜಕ, ಇಮ್ರಾನ್ ತಾಂತ್ರಿಕ ಸಹಾಯಕರು , ಸತ್ಯಜಿತ್ ನೀಡೋದಿಕರ್ ತಾಲೂಕು ಐ ಇ ಸಿ ಸಂಯೋಜಕರು, ಸಲೀಂ ಕಾರ್ಯದರ್ಶಿ, ಗೀತಾ ಗ್ರಾಮ ಕಾಯಕ ಮಿತ್ರರು, ಇದ್ದರು.