ಅಷ್ಟಗಿ: ಲಕ್ಷ್ಮೀ ದೇವಸ್ಥಾನ ಜಾತ್ರೆ ಸಂಪನ್ನ

ಕಲಬುರಗಿ: ಡಿ.28:ತಾಲೂಕಿನ ಸುಕ್ಷೇತ್ರ ಅಷ್ಟಗಿ ಗ್ರಾಮದ ನಡು ಊರ ಶ್ರೀ ಲಕ್ಷ್ಮೀ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ನಡು ಊರ ಶ್ರೀ ಲಕ್ಷ್ಮೀ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾದ ದಿನಕರರಾವ ನಾರಾಯಣರಾವ ಕುಲಕರ್ಣಿ ಅಷ್ಟಗಿ ಅವರ ನೇತೃತ್ವದಲ್ಲಿ ಜಾತ್ರಾ ಉತ್ಸವದ ಕಾರ್ಯಕ್ರಮಗಳು ನಡೆದವು. ಅಧ್ಯಕ್ಷರ ಮನೆಯಿಂದ ಕಳಸದ ಮೆರವಣಿಗೆಯು ಹೊರಟು ಬಾಜಾ ಬಜಂತ್ರಿ, ವೇದಮೇಳದೊಂದಿಗೆ ಸಾಗಿ ದೇವಸ್ಥಾನಕ್ಕೆ ಬಂದು ತಲುಪಿತು. ಅಷ್ಟಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರೊಂದಿಗೆ ಕಳಸಾರೋಹಣ ಮಾಡಲಾಯಿತು.
ಟ್ರಸ್ಟ್ ಕಾರ್ಯದರ್ಶಿ ಸುಧಾಕರ ಕುಲಕರ್ಣಿ ಅಷ್ಟಗಿ, ಸದಸ್ಯರಾದ ಹಣಮಂತರಾವ ಕುಲಕರ್ಣಿ, ಉತ್ತಮ ಕುಲಕರ್ಣಿ, ವೆಂಕಟೇಶ ಆರ್. ಕುಲಕರ್ಣಿ ಬಂಗರಗಿ, ಅರ್ಜುನ ಆಲಗೂಡ, ಶರಣಬಸಪ್ಪ, ನಾಗೇಂದ್ರಪ್ಪ ಮಾಲಿಪಾಟೀಲ, ಶರಣಬಸಪ್ಪ ಬಿರಾದಾರ, ಅರುಣಕುಮಾರ ಚಂದ್ರಕಾಂತ ಬೆನಕನಹಳ್ಳಿ, ಶಿವಪ್ಪ ನಿಡಂಚಿ, ಶಿವಯ್ಯ ಸ್ವಾಮಿ, ಕೃಷ್ಣಾ ರಂಗರಾವ ಕುಲಕರ್ಣಿ, ಶಿವಲಿಂಗಪ್ಪ ಬೆನಕನಹಳ್ಳಿ, ಶ್ರೀ ಮಹಾದೇವ ಭಜನಾ ಮಂಡಳಿ ವೃಂದದವರು, ಗ್ರಾಮಸ್ಥರು ಪಾಲ್ಗೊಂಡರು.