ಅಶ್ವಿನಿ ಸ್ವಾಮಿಗೆ ಪ್ರಶಸ್ತಿ

ಬೀದರ್:ನ.6: ಇಲ್ಲಿಯ ಬೀದರ್ ಕುಮಾರೇಶ್ವರ ಸಾಂಸ್ಕøತಿಕ ಸೇವಾ ಸಂಘದ ಅಧ್ಯಕ್ಷರು ಅಶ್ವಿನಿ ಸ್ವಾಮಿ ರಾಜಕುಮಾರ್ ಸ್ವಾಮಿ ಅವರಿಗೆ ಹೈದರಾಬಾದ್ ಕರ್ನಾಟಕ ನಾಗರಿಕರ ವೇದಿಕೆ ವತಿಯಿಂದ ಕೊಡಲಾಗುವ ಪ್ರಸಕ್ತ ಸಾಲಿನ ರಾಜ್ಯಮಟ್ಟದ ನೃಪತುಂಗ ಪ್ರಶಸ್ತಿ ದೊರೆತಿದೆ. ಕಲಬುರಗಿಯ ಕನ್ನಡ ಭವನದಲ್ಲಿ ನಡೆದ ಕಲ್ಯಾಣ ಕರ್ನಾಟಕ ಸಾಂಸ್ಕಂತಿಕ ಸಂಭ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲೆಯ ಅಧ್ಯಕ್ಷರು ವಿಜಯಕುಮಾರ ತೇಗಲತಿಪ್ಪಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.ಸಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅಶ್ವಿನಿ ಅವರಿಗೆ ಪ್ರಶಸ್ತಿ ಲಭಿಸಿದೆ. ಅಶ್ವಿನಿ 10 ವರ್ಷಗಳಿಂದ ಸಂಸ್ಕೃತಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರಳ, ಸೌಜನ್ಯತೆ, ಸೇವಾ ಹೆಸರಾಗಿದ್ದಾರ ಸಮಾರಂಭದಲ್ಲಿ ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತಿಗಳು ಇದ್ದರು.