ಅಶ್ವಿನಿ ವೇ ಬ್ರಿಡ್ಜ್ ತೆರವಿಗೆ ಆಗ್ರಹ

ರಾಯಚೂರು.ಫೆ.೦೧- ತಾಲೂಕಿನ ಚಿಕ್ಕಸೂಗೂರು ಗ್ರಾಮದ ಹೈದ್ರಾಬಾದ ಮುಖ್ಯ ರಸ್ತೆಯಲ್ಲಿರುವ ಅಶ್ವಿನಿ ಆಕ್ರೋಸ್ ವೇ-ಬ್ರಿಡ್ಜ್ ತೆರವುಗೊಳಿಸುವಂತೆ ಆಗ್ರಹಿಸಿ ದಲಿತ ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಚಿಕ್ಕಸೂಗೂರು ಗ್ರಾಮದ ಹೈದ್ರಾಬಾದ ಮುಖ್ಯ ರಸ್ತೆಯಲ್ಲಿರುವ ಅಶ್ವಿನ ಆಕ್ರೋಸ್ ವೇ ಬ್ರಿಡ್ಜ್‌ನಿಂದ ಸುಮಾರು ಸಮಸ್ಯೆಗಳು ಉದ್ಭವಿಸುತ್ತಿದ್ದು, ಇಲ್ಲಿ ಸಂಚಾರ ಮಾಡುವ ಲೋಡ್ ಲಾರಿಗಳಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದ್ದು, ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ವಾಹನಗಳು ಅತ್ಯಂತ ವೇಗದಿಂದ ಬರುವುದರಿಂದ ಸದರಿ ಸ್ಥಳದಲ್ಲಿ ಅಪಘಾತಗಳಾಗಿ ಪ್ರಾಣಹಾನಿಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ಆರೋಪಿಸಿದರು.
ಅಲ್ಲದೇ ವೇ ಬ್ರಿಡ್‌ಗೆ ಹೋಗಿ ಬರುವ ಲಾರಿಗಳಿಂದ ಬರುವ ಧೂಳಿನಿಂದ ಪರಿಸರ ಮಾಲಿನ್ಯ ಉಂಟಾಗಿ ಇಲ್ಲಿ ಸಂಚಾರ ಮಾಡುವ ಸಾರ್ವಜನಿಕರಿಗೆ ಕಣ್ಣಿಗೆ ಸಂಬಂಧಿಸಿದ ಮತ್ತು ಇತ್ಯಾದಿ ರೋಗಗಳು ಬಾಧಿಸುತ್ತಿದ್ದು, ಸದರಿ ವೇ-ಬ್ರಿಡ್ಜ್ ರಸ್ತೆಯ ಪಕ್ಕದಲ್ಲಿಯೇ ಇರುವುದರಿಂದ ವಾಹನ ಸವಾರರ ಮುಂಜಾಗೃತ ಕ್ರಮವಾಗಿ ಜೀವವನ್ನು ಕಾಪಾಡಲು ಹಾಗೂ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಈ ವೇ ಬ್ರಿಡ್ಜ್ ತೆರವುಗೊಳಿಸಬೇಕೆಂದು ಒತ್ತಾಯಿಸಿದರು.
ನಿರ್ಲಕ್ಷ ಮುಂದುವರಿದರೆ ಚಿಕ್ಕಸೂಗೂರು ರಾಷ್ಟ್ರಿಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಾಬುರಾವ, ಕೃಷ್ಣ ಮಾಚರ್ಲಾ, ಮಧುಕಾಂತ್, ನರಸಪ್ಪ, ಮಾರುತಿ ಚಿಕ್ಕಸೂಗೂರು, ಚಂದ್ರಶೇಖರ, ನರಸಿಂಹಲು ಸೇರಿದಂತೆ ಉಪಸ್ಥಿತರಿದ್ದರು.