ಅಶ್ವಮೇಧ ಬಸ್‍ಗಳಿಗೆ ದರ್ಶನ್ ಧ್ರುವ ಚಾಲನೆ

ಸಂಜೆವಾಣಿ ವಾರ್ತೆ
ನಂಜನಗೂಡು: ಮಾ.04:- ಕ್ಷೇತ್ರದ ನಗರ ಮತ್ತು ಗ್ರಾಮಾಂತರ ವಿಭಾಗಗಳಿಗೆ ನೂತನ ಹತ್ತು ಅಶ್ವಮೇಧ ಬಸ್ ಸಂಚಾರಕ್ಕೆ ಶಾಸಕ ದರ್ಶನ್ ದ್ರುವ ನಾರಾಯಣ್ ಚಾಲನೆ ನೀಡಿದರು.
ಮುಂದುವರೆದು ಮಾತನಾಡಿ ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಇಂದ ಮಹಿಳೆಯರಿಗೆ ಉಚಿತ ಬಸ್ ಸಂಚಾರ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣಿಸುವುದು ಕಂಡು ಬಂದಿದೆ ಅದರ ಹಿನ್ನೆಲೆಯಲ್ಲಿ ಎರಡು ಮೂರು ತಿಂಗಳ ಗಳಿಂದ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬಸ್ಸಿನ ಕೊರತೆ ಉಂಟಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆವಿದ್ಯಾಭ್ಯಾಸಕ್ಕೆ ಮತ್ತು ಕೂಲಿಕಾರ್ಮಿಕರಿಗೆ ಬಸ್ಸಿಲ್ಲದೆ ಬಹಳ ತೊಂದರೆ ಉಂಟಾಗಿತ್ತು ಬಸ್ಸಿನಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣಿಸುತ್ತಿದ್ದ ರಿಂದ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸೀಟ್ ಇಲ್ಲದೆ ಬಹಳ ತೊಂದರೆಯಾಗಿತ್ತು ಇವೆಲ್ಲ ವಿಷಯವೂ 3-4 ತಿಂಗಳಿಂದ ನನ್ನ ಗಮನಕ್ಕೆ ಬಂದಿತ್ತು ನಾನು ಕೂಡ ಸದನದಲ್ಲಿ ಎರಡು ಬಾರಿ ನನ್ನ ಕ್ಷೇತ್ರದಲ್ಲಿ ಬಸ್ಸಿನ ಕೊರತೆ ಇದೆ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಬಸ್ಸಿನ ಸೌಲಭ್ಯ ಒದಗಿಸಬೇಕೆಂದು ಗಮನಕ್ಕೆ ತಂದು ಮನವಿ ಮಾಡಿದೆ ಅದರಂತೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಗಮನಕ್ಕೂ ತಂದಿದ್ದೆ ಸದನದಲ್ಲೇ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಒಂದು ವಾರದಲ್ಲಿ ನಿಮ್ಮ ಕ್ಷೇತ್ರಕ್ಕೆ ಹೆಚ್ಚಿನ ಬಸ್ಸಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು ಅದರಂತೆ ಇಂದು ನನ್ನ ಕ್ಷೇತ್ರಕ್ಕೆ 10 ನೂತನ ಅಶ್ವಮೇಧ ಬಸ್ ಗಳನ್ನು ನೀಡಿದ್ದಾರೆ. ನಾನು ಕೂಡ ಇಂದು ಬಸ್ಸಿನಸಂಚಾರಕ್ಕೆ ಚಾಲನೆ ನೀಡುತ್ತಿದ್ದೇನೆ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನ ರವರಿಗೂ ಮತ್ತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು
ಶಕ್ತಿ ಯೋಜನೆಯಿಂದ ಮಹಿಳೆಯರು ಸಬಲರಾಗಿದ್ದು ಮಹಿಳೆಯರು ಎಲ್ಲಿಯಾದರೂ ಸ್ವತಂತ್ರವಾಗಿ ತಿರುಗಾಡಬಹುದು ಈ ಮೂಲಕ ಅವರ ಆತ್ಮ ಸ್ಥೈರ್ಯ ಹೆಚ್ಚುತ್ತಿದೆ ಇನ್ನು ಮುಂದೆ ಗ್ರಾಮಾಂತರ ವಿದ್ಯಾರ್ಥಿಗಳಿಗೆ ಮತ್ತು ಕೂಲಿಕಾರ್ಮಿಕರಿಗೆ ಸಾರ್ವಜನಿಕರಿಗೆ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ ಎಂದರು
ಈ ನೂತನ ಬಸ್ಸಿನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿಪಾಯಿಂಟ್ ಟು ಪಾಯಿಂಟ್ ಎಕ್ಸ್ಪ್ರೆಸ್ ಬಸ್ ಗಳಿಗಾಗಿ ಸಂಚಾರ ನಡೆಯಲಿದೆ ಇವು ಪರಿಸರ ಸ್ನೇಹಿಯಾಗಿದ್ದು ಸೆನ್ಸಾರ್ ಚಾಲಿತ ನ್ಯೂ ವ್ಯಾಟಿಕ್ ಬಾಗಿಲು ತುರ್ತು ಬಟನ್ ಸಾಮಾನ್ಯ ಬಸ್ ಗಳಿಗಿಂತ ಒಂದು ಅಡಿ ಎತ್ತರ ಹೊಂದಿದೆ ಈಗಾಗಿ ಬೆಳಕು ಹಾಗೂ ಗಾಳಿ ಪ್ರಯಾಣಿಕರಿಗೆ ಹೆಚ್ಚು ದೊರೆಯಲಿದೆ ಸೀಟ್ ಗಳ ನಡುವೆ ಅಂತರ ಆರಾಮದಾಯಕ ಸೀಟುಗಳು ನೀರಿನ ಬಾಟಲ್ ಹಾಗೂ ಪತ್ರಿಕೆ ಇಡಲು ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಇದೆ ಅಲ್ಲದೆ ಚಾಲಕರಿಗೆ ಅನುಕೂಲವಾಗಲಿ ಎಂದು ಬಸ್ ನ ಮುಂದೆ ಆಗು ಹಿಂದೆ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ ಎಂದರು.
ಶಾಸಕರಾದ ದರ್ಶನ್ ಧ್ರುವನಾರಾಯಣ್ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮತ್ತು ಬ್ಲಾಕ್ ಅಧ್ಯಕ್ಷರುಗಳು ಮತ್ತು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳು ಬಸ್ ನಲ್ಲಿ ಒಂದು ಕಿಲೋಮೀಟರ್ ಪ್ರಯಾಣಿಸಿದರು
ಈ ಸಂದರ್ಭದಲ್ಲಿ ಅಧಿಕಾರಿಗಳಾದ ವೀರೇಶ್ ತ್ಯಾಪಿ ತ್ಯಾಗರಾಜು ದಸರತ್ ಶಿವರಾಜ್ ಗೌಡ್ರು ಮೂಡಲ್ಲಿ ರಾಜೇಶ್ ಬಸವರಾಜು ಚಿನ್ನಸ್ವಾಮಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಬ್ಲಾಕ್ ಅಧ್ಯಕ್ಷರಾದ ಶ್ರೀಕಂಠ ನಾಯಕ ಶಂಕರ್ ನಗರಸಭೆ ಸದಸ್ಯರಾದ ಗಂಗಾಧರ ಗಾಯತ್ರಿ ಪ್ರದೀಪ್ ಮಹೇಶ್ ಸೇರಿದಂತೆ ಇತರರಿದ್ದರು