ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜ ದಶಮಾನೋತ್ಸವ

ದಾವಣಗೆರೆ, ಜ. 23: ಒಂದು ಸಂಸ್ಥೆ, ಸಮಾಜ, ಸಂಘ ಹತ್ತು ವರ್ಷ ದಾಟಿ ಬರುವುದು ಸುಲಭದ ಮಾತಲ್ಲ. ಅಂತಹದರಲ್ಲಿ ಈ ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜ ದಶಮಾನೋತ್ಸವ ಆಚರಿಸುತ್ತಿದೆ. ಹಾಗೆಯೇ ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಇದೇ ಶಕ್ತಿಯಲ್ಲಿ ಈ ಸಮಾಜ ದೀರ್ಘಕಾಲ ಬೆಳೆಯಲಿ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ, ಹಿರಿಯ ಪತ್ರಕರ್ತರಾದ ಸದಾನಂದ ಹೆಗಡೆ ಆಶಿಸಿದರು.ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶಂಕರ ಸಮುದಾಯ ಭವನದಲ್ಲಿ ಭಾನುವಾರ ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಚೈತನ್ಯ ಸಾಂಸ್ಕೃತಿಕ ಸೌರಭ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಶ್ವತ್ಥ ಎಂಬ ಈ ಮರಕ್ಕೆ 10 ವರ್ಷಗಳು ಕಳೆದಿವೆ. ಈ ಮರದ ಬಳಿ ಒಂದು ಕಟ್ಟೆ ಇರುತ್ತೆ. ಮರದಲ್ಲಿ ಹಲವಾರು ರೀತಿಯ ಪಕ್ಷಿಗಳು ಗೂಡು ಕಟ್ಟುತ್ತವೆ. ನಿಮ್ಮ ಸಮುದಾಯವೂ ಸಹಾ ಒಂದು ಕಟ್ಟೆಯಾಗಿದೆ. ಸಮುದಾಯದ ಹಲವಾರು ವಿಚಾರಧಾರೆಗಳನ್ನು, ಸುಖಃ ದುಃಖಗಳನ್ನು ಹಂಚಿಕೊಳ್ಳುವ ಕಟ್ಟಯಾಗಲಿ ಎಂದರು.ಈ ಬ್ರಾಹ್ಮಣ ಸಮಾಜ ಅಶ್ವತ್ಥ ಎನ್ನುವ ಆದರ್ಶ ಇಟ್ಟುಕೊಳ್ಳಬೇಕು. ಈ ಸಮುದಾಯದಲ್ಲಿ ಹೋಟೆಲ್ ಉದ್ದಿಮೆ ಸೇರಿದಂತೆ ಹಲವಾರು ರೀತಿಯ ಸ್ಕಿಲ್‌ಗಳಿವೆ. ಹಾಗೆಯೇ ಕೆಲವು ವಂಚಿತ ಸಮುದಾಯಗಳಿವೆ, ಸಾಕ್ಷರರಾಗಬೇಕಾದ, ಇನ್ನೂ ಶಿಕ್ಷಣದಲ್ಲಿ ಹಿಂದೆ ಇರುವಂತಹ ಅಥವಾ ಕಲಿಕೆಯಲ್ಲಿ ಹಿಂದಿರುವAತಹ ದಲಿತ ಸಮುದಾಯದವರು, ಬೇರೆ ಬೇರೆ ಜಾತಿಯವರು ಇದ್ದಾರೆ. ನೀವು ಯಾವುದೇ ಜಾತಿಯವರೆನ್ನದೇ ಎಲ್ಲರಿಗೂ ಊಟ ನೀಡಿದ್ದೀರಿ ಎನ್ನುವ ವಿಶ್ವಾಸ ನನಗೆ ಇದೆ. ಅದನ್ನು ನಾವೆಲ್ಲರೂ ಸಹಾ ಮುಂದುವರೆಸಿಕೊAಡು ಹೋಗೋಣ. ನಾನೊಬ್ಬನೇ ಈ ಸಮುದಾಯದಲ್ಲಿ ಸುಖವಾಗಿ ಇರುತ್ತೇನೆ ಎಂದರೆ ಸಾಧ್ಯವಿಲ್ಲ. ಪಕ್ಕದ ಮನೆಯವರ ಜೊತೆಗೆ ಸುಖ ದುಃಖ ಹಂಚಿಕೊAಡು ಈ ಸಮುದಾಯದ ಎಲ್ಲಾ ಸ್ಥರಗಳ ಜೊತೆಗೆ ನೀವು ಹಾಗೆಯೇ ಬೆಳೆಯುತ್ತಾ ಇರಿ ಎಂದು ತಿಳಿಸಿದರು.ಸಮಾಜದ ಉಪಾಧ್ಯಕ್ಷ ಅಂಬರೀಷ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಸಂಘವನ್ನು ನಮ್ಮ ಸಮಾಜದ ಹಿರಿಯರು 75 ವರ್ಷಗಳ ಹಿಂದೆ ಮಿತ್ರಮಂಡಳಿ ಒಕ್ಕೂಟ ಮಾಡಿಕೊಂಡು ಹುಟ್ಟುಹಾಕಿದರು. ಮುಂದಿನ ದಿನಗಳಲ್ಲಿ 2012ರಲ್ಲಿ ಸಮಾಜ ಬಾಂಧವರೊAದಿಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆರಂಭವಾಯಿತು. ಕಳೆದೆರಡು ವರ್ಷಗಳು ಕೋವಿಡ್ ಸಂದರ್ಭದಲ್ಲಿ ಸಮಾಜದ ಬಡವರಿಗೆ ಆಹಾರ ದಿನಸಿ ಕಿಟ್, ಬಡ ಮಕ್ಕಳಿಗೆ ಪುಸ್ತಕ, ಪ್ರತಿಭಾ ಪುರಸ್ಕಾರ ನೀಡುವಂತಹ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಸಮಾಜ ಬಾಂಧವರ ಆಶೀರ್ವಾದ ಸಹಕಾರ ಈ ಸಂಘದ ಮೇಲೆ ಸದಾ ಇರಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಮಾಜದ ಗೀತಾ ಮುರಳಿಧರ, ಬಿ.ಆರ್.ಶ್ರೀಧರ ಹರಿಹರ, ಪಿ.ಸಿ.ಮಹಬಲೇಶ್ವರ, ಕೆ.ವಿ.ರತ್ನಾಕರ, ಚಂದ್ರಶೇಖರ ಸಂತೆಬೆನ್ನೂರು, ಕೆ.ಸತ್ಯನಾರಾಯಣ ಹರಪನಹಳ್ಳಿ, ವಿಶ್ವನಾಥ ಕೊಂಡಬೆಟ್ಟು, ಸುಮಾ ವೆಂಕಟೇಶ, ಶ್ರೀನಿವಾಸ ರಾವ್ ಬಡಗಾಬೆಟ್ಟು, ಮಂಜುಳ ಅಂಬರೀಶ ರಾವ್, ಎನ್.ಬಿ.ಪ್ರಭಾಕರ್‌ರನ್ನು ಸನ್ಮಾನಿಸಲಾಯಿತು.ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ.ಪಿ.ಎಸ್.ಸುರೇಶ ಬಾಬು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಂಜಿನಿಯರ್ ಟಿ.ಎಸ್.ಸತ್ಯನಾರಾಯಣ, ಚಲನಚಿತ್ರನಟಿ ಸುಪ್ರಿಯಾ ಎಸ್.ರಾವ್, ಬಿ.ಟಿ.ಚಂದ್ರಶೇಖರ, ಪಿ.ಎಲ್.ಶಂಕರ್ ಸೇರಿದಂತೆ ಇತರರು ಇದ್ದರು.ಮಹಿಳಾ ಮಂಡಳಿ ಸದಸ್ಯರು ಪ್ರಾರ್ಥಿಸಿದರೆ, ದಿವಾಕರ್ ಸ್ವಾಗತಿಸಿದರು. ಅನಿಲ್ ಬಾರೆಂಗಳ್ ಕಾರ್ಯಕ್ರಮ ನಿರೂಪಿಸಿದರು.