ಅಶ್ಲೀಲ ದೃಶ್ಯಗಳ ತಿರಸ್ಕರಿಸಿದ್ದ ಸುಹಾಸಿನಿ

ಹೈದರಾಬಾದ್,ಅ.೧೫-ಸುಹಾಸಿನಿ.. ಈ ಹೆಸರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಒಂದು ಕಾಲದಲ್ಲಿ ತನ್ನ ಸಹಜ ಸೌಂದರ್ಯ ಮತ್ತು ನಟನಾ ಕೌಶಲ್ಯದಿಂದ ಚಿತ್ರರಂಗವನ್ನು ಆಳಿದ ಸುಂದರಿ. ತಮ್ಮ ಅಭಿನಯದಿಂದ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಸುಹಾಸಿನಿ. ಸುಹಾಸಿನಿ ಮಣಿ ರತ್ನಂ ಇವರು ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷೆಯ ಪ್ರಸಿದ್ಧ ನಟಿಯಾಗಿದ್ದಾರೆ.
ನಂತರ ೧೯೮೦ ರಲ್ಲಿ ತಮಿಳು ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ತಮ್ಮ ಸಿನಿಮಾ ಪಯಣ ಪ್ರಾರಂಭಿಸಿದರು.
ಸುಹಾಸಿನಿ ಹಿರಿಯ ನಾಯಕಿ.ಆ ಸಮಯದಲ್ಲಿ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದರು. ಹಿರಿಯ ಸ್ಟಾರ್ ಹೀರೋಗಳಿಗೆ ಬೆಸ್ಟ್ ಪೇರ್ ಎಂದು ಮನ್ನಣೆ ಗಳಿಸಿದ ನಾಯಕಿ. ಇಂತಹ ನಾಯಕಿ ಇತ್ತೀಚೆಗಷ್ಟೇ ತನ್ನ ಜೀವನದಲ್ಲಿ ನಡೆದ ಕಹಿ ನೆನಪುಗಳ ಬಗ್ಗೆ.. ಇಂಡಸ್ಟ್ರಿಯಲ್ಲಿ ತನಗೆ ಆದ ಕಷ್ಟಗಳ ಬಗ್ಗೆ.. ಎಲ್ಲರೊಂದಿಗೆ ಹಂಚಿಕೊಂಡರು. ಅವರ ಕಾಮೆಂಟ್‌ಗಳಿಂದ ನೆಟ್ಟಿಗರು ಈಗ ವೈರಲ್ ಆಗಿದ್ದಾರೆ.
ವೃತ್ತಿಬದುಕಿನ ಆರಂಭದಲ್ಲಿ ನಾಯಕಿಯಾಗಿದ್ದಾಗ ಇಂಡಸ್ಟ್ರಿಯಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೆ ಎಂದಿದ್ದಾರೆ ಸುಹಾಸಿನಿ. ಕೆಲವು ಅಶ್ಲೀಲ , ಅಸಭ್ಯ ದೃಶ್ಯಗಳಲ್ಲಿ ನಟಿಸಬೇಕಾದ ಸನ್ನಿವೇಶಗಳನ್ನು ಒಪ್ಪದೆ ಸಾರಾಸಗಟಾಗಿ ತಿರಸ್ಕರಿಸಿದೆ ಎಂದಿದ್ದಾರೆ.
ಒಂದು ಸಿನಿಮಾದಲ್ಲಿ ನಾಯಕ ತನ್ನ ಮಡಿಲಲ್ಲಿ ಕೂರುವ ದೃಶ್ಯವಿದೆ. ನಿರ್ದೇಶಕರು ಮಾಡು ಅಂತ ಹೇಳಿದರೆ ಬೇಡ ಅಂದೆ. ಅಪರಿಚಿತ ಮಡಿಲಲ್ಲಿ ಕೂರುವುದು ತಪ್ಪು..ಹಾಗಾಗಿ ನಾನು ಆ ಸೀನ್ ಮಾಡುವುದಿಲ್ಲ ಎಂದು ಬಲವಾಗಿ ವಾದಿಸಿದೆ. ಅದೇ ಸಿನಿಮಾದಲ್ಲಿ ನಾಯಕ ಒಟ್ಟಿಗೆ ಐಸ್ ಕ್ರೀಮ್ ತಿನ್ನುವ ದೃಶ್ಯವಿದೆ. ಹೀರೋ ತಿಂದ ಐಸ್ ಕ್ರೀಂನನ್ನೇ ತಿನ್ನಿ ಅಂತ ಹೇಳಿದರು. ಅದು ನನಗೆ ಇಷ್ಟವಾಗಲಿಲ್ಲ.ಇತರರು ತಿಂದಿದ್ದನ್ನು ನಾನು ತಿನ್ನುವುದಿಲ್ಲ ಐಸ್ ಕ್ರೀಂ ಬದಲಿಸಿ ಎಂದಾಗ ಇದರಿಂದ ಕೊರಿಯೋಗ್ರಾಫರ್ ಶಾಕ್ ಆಗಿ. ನಾನು ಹೇಳಿದ ಹಾಗೆ ಮಾಡಬೇಕು ಎಂದು ಹೇಳಿದರು ಆದರೆ, ನಾನು ಒಪ್ಪಲಿಲ್ಲ. ಕನಿಷ್ಠ ಐಸ್ ಕ್ರೀಂ ಕೂಡಾ ಮುಟ್ಟುವುದಿಲ್ಲ ಎಂದಾಗ ಆ ಬಳಿಕ ಐಸ್ ಕ್ರೀಂ ಬದಲಾಯಿಸಿದರು ಎಂದು ಸುಹಾಸಿನಿ ಹೇಳಿದ್ದಾರೆ
ಸುಹಾಸಿನಿ ಚಿರಂಜೀವಿ, ಬಾಲಕೃಷ್ಣ, ವೆಂಟಕೇಶ್ ಮುಂತಾದ ದೊಡ್ಡ ನಾಯಕರೆಲ್ಲರ ಜೊತೆ ನಟಿಸಿ ಒಳ್ಳೆಯ ಮನ್ನಣೆ ಗಳಿಸಿದರು. ಪ್ರಸ್ತುತ, ಅವರು ತಾಯಿಯ ಪಾತ್ರದ ಜೊತೆಗೆ ಅನೇಕ ಚಿತ್ರಗಳಲ್ಲಿ ಪೋಷಕ ನಟಿಯಾಗಿ ನಟಿಸುತ್ತಿದ್ದಾರೆ. ಆದರೆ ಇತ್ತೀಚೆಗಷ್ಟೇ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುಹಾಸಿನಿ ನಾಯಕಿಯಾಗಿ ನಟಿಸುವಾಗ ಎದುರಾದ ಸಂದರ್ಶನದಲ್ಲಿ ಸುಹಾಸಿನಿ ನಾಯಕಿಯಾಗಿ ನಟಿಸುವಾಗ ಎದುರಾದ ಮುಜುಗರದ ಸನ್ನಿವೇಶಗಳ ಬಗ್ಗೆ ಮಾತನಾಡಿದ್ದಾರೆ.