ಅಶೋಕ ನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆ ಇಬ್ಬರು ಸರಗಳ್ಳರ ಬಂಧನ; 17.88 ಲಕ್ಷ ಮೌಲ್ಯದ ಆಭರಣ ಜಪ್ತಿ

ಕಲಬುರಗಿ, ಆ 16: ನಗರದ ವಿವಿಧ ಏರಿಯಾಗಳಲ್ಲಿ ಸರಗಳ್ಳತನ
ಮಾಡುತ್ತಿದ್ದ ಇಬ್ಬರು ಸರಗಳ್ಳರನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಳಂದ ರಿಂಗ್ ರೋಡ ಅಹ್ಮದ ನಗರದ ನಿವಾಸಿ ಶೇಖ್ ಅಜರುದ್ದಿನ್ ಶೇಖ್ ರಮೋದ್ದಿನ್ (26 ) ಮತ್ತು ಹಾಗರಗಾ ಕ್ರಾಸ್ ನೂರಾನಿ ಮೊಹಲ್ಲಾ ನಿವಾಸಿ ಫರ್ನಿಚರ್ ವರ್ಕರ್ ಮಹ್ಮದ್ ತೌಸೀಫ್ ಮಹ್ಮದ ರಫೀಕ್( 23) ಬಂಧಿತ ಆರೋಪಿಗಳು
ನಗರದ ವಿವಿಧ ಠಾಣೆಗಳಲ್ಲಿ ವರದಿಯಾದ 15 ಸರಗಳ್ಳತನ ಪ್ರಕರಣಗಳಿಗೆ
ಸಂಬಂಧಿಸಿದ 17.88 ಲಕ್ಷ ರೂ ಮೌಲ್ಯದ 298 ಗ್ರಾಂ ಬಂಗಾರದ ಆಭರಣಗಳು ಮತ್ತು ಕೃತ್ಯಗಳಿಗೆ ಉಪಯೋಗಿಸಿದ 2 ದ್ವಿಚಕ್ರ ವಾಹನಗಳನ್ನುಆರೋಪಿಗಳಿಂದ ಜಪ್ತಿ ಮಾಡಲಾಗಿದೆ.
ನಗರ ಉಪ ಪೊಲೀಸ್ ಆಯುಕ್ತರಾದ ಕನಿಕಾ ಸಿಕ್ರಿವಾಲ್ ಮತ್ತು ಐ.ಎ ಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಹಾಗೂದಕ್ಷಿಣ ಉಪವಿಭಾಗ ಸಹಾಯಕ ಪೆÇಲೀಸ್ ಆಯುಕ್ತ ಭೂತೇಗೌಡÀರ ನೇತೃತ್ವದಲ್ಲಿ ಸ್ಟೇಷನ್ ಬಜಾರ್ ಪೆÇಲಿಸ್ ಠಾಣೆಪೆÇಲೀಸ್ ಇನ್ಸ್ ಪೆಕ್ಟರ ಶಕಿಲ್‍ಅಹ್ಮದ ಅಂಗಡಿ , ಅಶೋಕ ನಗರ ಪೆÇಲೀಸ ಠಾಣೆಪೆÇಲೀಸ್ ಇನ್ಸ್ ಪೆಕ್ಟರ ಅರುಣಕುಮಾರ ಮತ್ತು ಸಿ.ಸಿ.ಬಿ ಘಟಕ ಪಿ.ಎಸ್.ಐ ಬಸವರಾಜ
ಹಾಗೂ ಸಿಬ್ಬಂದಿಗಳಾದ ವೈಜನಾಥ, ಗುರುಮೂರ್ತಿ, ಶಿವಲಿಂಗ, ಈರಣ್ಣಾ, ರಾಜಕುಮಾರ, ಫಿರೋಜ್, ಭೋಗೇಶ್,ಶಶಿಕಾಂತ, ಮೋಶಿನ್ ಮತ್ತು ಜಾವೀದ್ ಕೊತ್ವಾಲ್ ಅವರನ್ನು ಒಳಗೊಂಡ ತಂಡದವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರಗಳ್ಳರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರನ್ನು ನಗರ ಪೊಲೀಸ್ ಆಯುಕ್ತ ಚೇತನ್ ಆರ್ ಅವರು ಶ್ಲಾಘಿಸಿದ್ದಾರೆ.