ಅಶೋಕ್ ಲೇಲ್ಯಾಂಡ್ ಪಿಕಪ್ ಕಳ್ಳತನ

ಜೇವರ್ಗಿ:ಮಾ.7: ಪಟ್ಟಣದ ದತ್ತ ನಗರದಲ್ಲಿ ಭಗವಂತರಾಯ ಗೌಡ ನೆಂಗ ಕೋಳಕೂರು ಎಂಬೂರಿಗೆ ಸೇರಿದ ಅಶೋಕ್ ಲೇಲ್ಯಾಂಡ್ ಗಾಡಿ ಪಿಕಪ್ ಕಳ್ಳತನವಾಗಿದೆ ಎಂದು ಭಗವಂತ ರಾಯಗೌಡ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ದಿನ ದಿನಕ್ಕೆ ಪಟ್ಟಣದಲ್ಲಿ ಅತಿ ಹೆಚ್ಚು ಕಳ್ಳತನವಾದರೂ ಕಳ್ಳರನ್ನು ಹಿಡಿಯುವಲ್ಲಿ ತಾಲೂಕ ಆಡಳಿತ ವಿಫಲವಾಗಿದೆ ಎಂದು ಅನೇಕ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕೂಡಲೇ ಕಳ್ಳತನ ಮಾಡಿರುವ ಕಳ್ಳರನ್ನು ಹಿಡಿದು ಅವರಿಂದ ವಾಹನ ಮತ್ತು ಸಾಮಗ್ರಿಗಳನ್ನು ಮತ್ತು ಹಣವನ್ನು ವಾಪಸ್ ಕಳುವಾದ ಕುಟುಂಬದವರಿಗೆ ಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರಾದ ಬಿಎಚ್ ಮಾಲಿ ಪಾಟೀಲ್ ತಾಲೂಕ ಆಡಳಿತಕ್ಕೆ ಒತ್ತಾಯ ಮಾಡಿದ್ದಾರೆ ಹಾಗೂ ಪೆÇಲೀಸ್ ಇಲಾಖೆ ಕೂಡಲೆ ತಪ್ಪಿದಸ್ಥ ಕಳ್ಳರನ್ನು ಕೂಡಲೇ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಪಟ್ಟಣದ ನಾಗರಿಕರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು ಸತತವಾಗಿ ಪಟ್ಟಣದಲ್ಲಿ ಪೇಂಟರ್ ದುಕನ 5 ಸಾರಿ ಕಳ್ಳತನವಾಗಿದೆ ಮತ್ತು ಲಕ್ಷ್ಮಿ ಚೌಕಿನಲ್ಲಿ ಎರಡು ಜೋಡೆತ್ತು ಕಳ್ತನವಾಗಿದೆ ತಾಲೂಕಿನ ಕೆಲೂರ ಗ್ರಾಮದಲ್ಲಿ ಒಂದು ಆಕಳು ಕಳ್ಳತನವಾಗಿದೆ ಒಟ್ಟಾರೆ ಹೇಳಬೇಕಾದರೆ ತಾಲೂಕಿನಲ್ಲಿ ಭಯದ ವಾತಾವರಣದಿಂದ ಜನಸಾಮಾನ್ಯರು ಬದುಕು ಸ್ಥಿತಿ ನಿರ್ಮಾಣವಾಗಿದೆ ಕಳ್ಳರಿಗೆ ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಕಳ್ಳತನವ ಮಾಡುವ ಚಾಳಿ ಮುಂದುವರಿಸಿದ್ದಾರೆ ಅದಕ್ಕೆ ಪೆÇಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.