ಅಶೋಕ್ ಬರ್ತಡೆಗೆ ಅನ್ನದಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ನ,19- ಭಾರತೀಯ ಜನತಾ ಪಾರ್ಟಿಯ  ಜಿಲ್ಲೆ ಪ್ರಧಾನ ಕಾರ್ಯದರ್ಶಿ ಮತ್ತು ಇಲ್ಲಿನ  ಮಹಾನಗರ ಪಾಲಿಕೆಯ 19ನೇ ವಾರ್ಡಿನ ಸದಸ್ಯ ಡಾ. ಕೆ. ಎಸ್. ಅಶೋಕ್ ಕುಮಾರ್ ಅವರ ಜನ್ಮದಿನ ಆಚರಣೆಯನ್ನು ನಿನ್ನೆ ಆಚರಿಸಲಾಯಿತು.
ಇದರಂಗವಾಗಿ  ನಗರದ  13 ನೇ ವಾರ್ಡಿನ ರೂಪನ ಗುಡಿ ನಾರಪ್ಪ ಬೀದಿಯಲ್ಲಿ  ಸಾರ್ವಜನಿಕರಿಗೆ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಜೆ ನಗರದ ಸತ್ಯನಾರಾಯಣ ಪೇಟೆಯ ರಾಘವೇಂದ್ರಸ್ವಾಮಿಗಳ ಸರ್ಕಲ್ ನಲ್ಲಿ ಸಹ ಅಶೋಕ್ ಅವರ ಅಭಿಮಾನಿಗಳು ಕೇಕ್ ಕತ್ತರಿಸಿ ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ  ಮೌಲಾ ಅಲಿ, ವೆಂಕಟೇಶ್, ರಾಕೇಶ್, ಪ್ರದೀಪ್, ಸುರೇಶ್, ಅಪ್ಪು ರವಿ, ಕುಮಾರಸ್ವಾಮಿ,ಮಿಥುನ್, ಬಾಬು ಸಾಯಿ ರಾಮ್, ಹನೀಫ್, ಗಾದಿಲಿಂಗ, ಧನಂಜಯ್, ಇಮ್ರಾನ್, ಶಬೀರ್, ರಹೀಂ ಮೊದಲಾದವರು ಪಾಲ್ಗೊಂಡಿದ್ದರು.