ಅಶೋಕ್ ಗಸ್ತಿ ನಿಧನ: ಡಿಸೆಂಬರ್ 1 ಕ್ಕೆ ರಾಜ್ಯ ಸಭೆ ಉಪಚುನಾವಣೆ

ನವದೆಹಲಿ, ನ.2- ಕರ್ನಾಟಕದ ಬಿಜೆಪಿ ರಾಜ್ಯಸಭಾ ಸದಸ್ಯ ಅಶೋಕಗ ಗಸ್ತಿ ಅವರ ನಿಧನ ದಿನದ ತೆರವಾಗಿದ್ದ ರಾಜ್ಯಸಭೆಗೆ ಡಿಸೆಂಬರ್ 1 ರಂದು ಚುನಾವಣಾ ಆಯೋಗ ಉಪ ಚುನಾವಣೆ ನಿಗಧಿ ಮಾಡಿದೆ.

ನವಂಬರ್ 11 ರಂದು ಅಧಿ ಸೂಚನೆ ಹೊರಡಿಸಲಿದ್ದು ನಾಮಪತ್ರ ಸಲ್ಲಿಸಲು ನವೆಂಬರ್ 18 ಕೊನೆ ದಿನವಾಗಿದೆ.

ನವೆಂಬರ್ 19 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ನವೆಂಬರ್ 23 ರಂದು ನಾಮ‌ಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ.

ಡಿಸೆಂಬರ್ 1 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ ತನಕ ಮತದಾನ‌ ನಡೆಯಲಿದೆ. ಅಂದೇ ಮತ ಎಣಿಕೆ ನಡೆಯಲಿದೆ

ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಸದಸ್ಯರ ನಿಧನದಿಂದ ತೆರವಾಗಿರುವ ಸ್ಥಾನ ಬಿಜೆಪಿಗೆ ಸಿಗುವುದು ಬಹುತೇಕ ಖಚಿತವಾಗಿದೆ.

ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಸದ್ಯದ ಕುತೂಹಲ.

ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಭ್ಯರ್ಥಿಗಳನ್ನು ಕಣಕ್ಕಿಸುವ ಸಾದ್ಯತೆಯೂ ಹೆಚ್ಚಿವೆ