ತಿಪಟೂರು, ಜು. ೨೦- ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕೆ ಶಾಲಾ ಮಕ್ಕಳಿಗೆ ಹತ್ತು ಸಾವಿರ ನೋಟ್‌ಬುಕ್ ವಿತರಣೆ, ನಗರವನ್ನು ಪ್ರತಿನಿತ್ಯ ಸ್ವಚ್ಚಗೊಳಿಸುವ ೧೬೦ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ, ಪರಿಸರ ರಕ್ಷಣೆಗಾಗಿ ಸಸಿಗಳನ್ನು ನೆಡುವ ಕಾರ್ಯಕ್ರಮ, ಪ್ರಾಣಿ ಪ್ರಿಯರಿಗೆ ಗೋತಳಿ ಉಳಿವಿಗಾಗಿ ೧೦೮ ಹಳ್ಳಿಗಾರ್ ತಳಿಯ ಹಸುಗಳ ದತ್ತು ಕಾರ್ಯಕ್ರಮ, ಸಾರ್ವಜನಿಕರ ಆರೋಗ್ಯದ ಒಳಿತಿಗಾಗಿ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಸಮಾಜ ಸೇವಕ ಲೋಕೇಶ್ವರ್ ರವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ಲೋಕೇಶ್ವರ್ ಅಭಿಮಾನಿ ಬಳಗ ಹಾಗೂ ಹಳ್ಳಿಗಾರ್ ಸಾಮ್ರಾಜ್ಯದ ವತಿಯಿಂದ ಸಮಾಜ ಸೇವಕ, ನಿವೃತ್ತ ಪೊಲೀಸ್ ಅಧಿಕಾರಿ, ಕಾಂಗ್ರೆಸ್ ಮುಖಂಡ ಲೋಕೇಶ್ವರ್ ರವರ ೬೫ನೇ ಹುಟ್ಟುಹಬ್ಬವನ್ನು ವಿಶೇಷ ಹಾಗೂ ವಿನೂತನವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕೇಶ್ವರ್, ಹುಟ್ಟುವಾಗ ನಾವುಗಳು ಯಾವುದನ್ನು ತರುವುದಿಲ್ಲ, ಹೋಗುವಾಗ ಸಹ ಯಾವುದನ್ನು ತೆಗೆದುಕೊಂಡು ಹೋಗುವುದಿಲ್ಲ. ಅದ್ದರಿಂದ ಮನುಷ್ಯನು ದುಡಿದ ದುಡಿಮೆಯಲ್ಲಿ ಬಡವರನ್ನು, ಅಸಹಾಯಕರನ್ನು ಆಶಕ್ತರನ್ನು, ಸ್ವಲ್ಪಮಟ್ಟಿಗೆ ಮೇಲೆತ್ತುವ ಕೆಲಸವನ್ನು ಉಳ್ಳವರು ಮಾಡಬೇಕಾಗಿದೆ. ಮನುಷ್ಯನು ಸ್ವಾರ್ಥಕ್ಕೆ ಎಲ್ಲವನ್ನೂ ಬಳಸಿಕೊಳ್ಳದೆ, ನಿಸ್ವಾರ್ಥ ಮನಸ್ಸುವುಳ್ಳವನಾಗಿ ಸಮಾಜ ಸೇವೆ ಮಾಡಿದಾಗ ಮನುಷ್ಯ ಉತ್ತಮ ವ್ಯಕ್ತಿಯಾಗಿ ಬದಕಲು ಸಾಧ್ಯ ಎಂದರು.
ನಾವುಗಳು ಹುಟ್ಟುವಾಗ ಬಡತನದಲ್ಲಿ ಹುಟ್ಟಿ ತಂದೆ-ತಾಯಿಯರ ಆರ್ಶೀವಾದದಿಂದ ವಿದ್ಯಾಭ್ಯಾಸ ಮಾಡಿ ಸರ್ಕಾರಿ ಕೆಲಸ ಪಡೆದು ನಿವೃತ್ತಿ ಹೊಂದಿದ್ದರೂ ಸಹ ಹುಟ್ಟೂರಿನಲ್ಲಿ ಸಮಾಜ ಸೇವೆ ಮಾಡುತ್ತಾ ಬರುತ್ತಿರುವುದು ನನ್ನ ಪುಣ್ಯದ ಕೆಲಸ ಎಂದರು.
ತಾಲ್ಲೂಕಿನ ಅಭಿಮಾನಿಗಳಲ್ಲದೆ ಹೊರ ಜಿಲ್ಲೆಗಳ ಸಂಘ-ಸಂಸ್ಥೆಯ ಪದಾದಿಕಾರಿಗಳು ಆಗಮಿಸಿ ಶುಭ ಹಾರೈಸಿದರು.