ಅವ್ಯವಸ್ಥೆ: ಸರಿಪಡಿಸಲು ಆಗ್ರಹ

(ಸಂಜೆವಾಣಿ ವಾರ್ತೆ)
ಇಲಕಲ್ಲ,ಆ21: ತಾಲೂಕಿನ ಹಿರೇ ಓತಗೇರಿಯ ಗ್ರಾಮ ಪಂಚಾಯತಿಯ ಕಿಡಕಿಗಳು ಶಿಥಿಲಗೊಂಡಿದ್ದು ನೆಲಕ್ಕೆ ಬೀದ್ದಿವೆ, ಪಕ್ಕದಲ್ಲೇ ಗ್ರಂಥಾಲಯ ಇರುವುದರಿಂದಾಗಿ ಶಾಲಾ ಮಕ್ಕಳು ಓದಲು ದಿನನಿತ್ಯ ಬರುತ್ತಾರೆ, ಏನಾದರೂ ಅನಾಹುತವಾದರೇ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಕಳೆದ 15 ದಿವಸದಿಂದ ಪಂಚಾಯತಿಗೆ ಅಭಿವೃದ್ಧಿ ಅಧಿಕಾರಿ ಇಲ್ಲದೇ ಜನರು ಪರದಾಡುತ್ತಿದ್ದಾರೆ. ಪ್ರಭಾರಿಯವರು ಯಾರಾಗಿದ್ದಾರೆ ಎಂಬುದೆ ಜನರಿಗೆ ಗೊತ್ತಿಲ್ಲ,ದಿನನಿತ್ಯ ಕೆಲಸಕ್ಕೆಂದು ಗ್ರಾಮ ಪಂಚಾಯತಿಗೆ ಬಂದಾಗ ಅಧಿಕಾರಿಗಳಿಲ್ಲದೇ ಹಾಗೆಯೆ ಹೊಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಅಲ್ಲದೇ ನರೆಗಾ ಕೂಲಿ ಕೆಲಸ ಕೇಳಲು ಕಾರ್ಮಿಕರು ಬಂದರೆ ಪಿಡಿಓ ಇಲ್ಲ ಬಂದ ಮೇಲೆ ಕೆಲಸ ನೀಡುತ್ತೇವೆ ಎಂಬ ಮಾತು ಆಡುತ್ತಾರೆ. ಇಡೀ ಗ್ರಾಮ ಪಂಚಾಯತಿಗೆ ಒಬ್ಬರೇ ಕಾರ್ಯದರ್ಶಿ, ಹಾಗೂ ಒಬ್ಬ ಕಂಪ್ಯೂಟರ್ ಆಪರೇಟರ್ ಬಿಟ್ಟರೇ ಯಾವುದೇ ಸಿಬ್ಬಂದಿಗಳಿಲ್ಲ,ಹಿಗಾಗಿ ಗ್ರಾಮ ಪಂಚಾಯತಿ ಇದ್ದರೂ ಇಲ್ಲದಂತಾಗಿದೆ.ಇದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.