ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ

ಬೆಂಗಳೂರು.ಮೇ.೧೨- ಹನಿ ನೀರು ಇಲ್ಲದೇ ಬೇಸತ್ತ ವಿದ್ಯಾರ್ಥಿನಿಯರು ಇಂದು ಬೆಳ್ಳಂ ಬೆಳಗ್ಗೆ ರೋಡ್‌ಗಿಳಿದು ಪ್ರತಿಭಟನೆ ಮಾಡಿ ರಸ್ತೆ ತಡೆ ನಡೆಸಿದ ಘಟನೆ ಜ್ಞಾನ ಭಾರತಿ ಆವರಣದಲ್ಲಿ ನಡೆದಿದೆ.
ರಮಾಬಾಯಿ ಹಿಂದುಳಿದ ವರ್ಗದ ಲೇಡಿಸ್ ಹಾಸ್ಟೆಲ್ ಅವ್ಯವಸ್ಥೆಗಳ ಆಗರವಾಗಿದೆ ಎಂದು ಖಂಡಿಸಿ ಬೆಂಗಳೂರು ವಿವಿ ವಿದ್ಯಾರ್ಥಿನಿಯರು ರಸ್ತೆಯಲ್ಲೆ ಬಕೆಟ್ ಹಿಡಿದು ಆಕ್ರೋಶ ಹೊರ ಹಾಕಿದರು.
ಇದರ ಪರಿಣಾಮ ರೋಡ್ ಬಂದ್ ಆಯಿತು. ಬಿಎಂಟಿಸಿ ಬಸ್ ಮತ್ತು ಖಾಸಗಿ ಬಸ್‌ಗಳು ಸಾಲುಗಟ್ಟಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು.
ಸ್ಥಳಕ್ಕೆ ದೌಡಾಯಿಸಿದ ವಿವಿ ಅಧಿಕಾರಿಗಳು ವಿದ್ಯಾರ್ಥಿನಿಯರನ್ನ ಸಮಾಧಾನಪಡಿಸಿದರೂ ಪ್ರಯೋಜನ
ವಾಗಲಿಲ್ಲ. ಕುಲಪತಿ, ಕುಲಸಚಿವ ಬರಬೇಕೆಂದು ಬಿಗಿ ಪಟ್ಟುಹಿಡಿದರು.
ನಂತರ ತಾತ್ಕಲಿಕ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ ಬಳಿಕ ವಿದ್ಯಾರ್ಥಿನಿಯರು ಸಮಾಧಾನಗೊಂಡು ಪ್ರತಿಭಟನೆ ಹಿಂಪಡೆದರು.
ನಿನ್ನೆ ಭಾರೀ ಮಳೆ ಸುರಿದಿದ್ದರಿಂದ ವಿದ್ಯುತ್ ವ್ಯತ್ಯಯವಾಗಿದ್ದರಿಂದ ನೀರಿನ ಪಂಪ್ ಬಳಸಲು ಆಗಿಲ್ಲ ಎಂದು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಮಿತಿ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.
ಸದ್ಯಕ್ಕೆ ಟ್ಯಾಂಕರ್ ವ್ಯವಸ್ಥೆ ಕಲ್ಪಿಸಿದ್ದು ಉಳಿದ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ಸರ್ಕಾರಿ ವಿವಿಗಳಲ್ಲೆ ಬೆಂಗಳೂರು ವಿವಿಗೆ ಅಗ್ರಸ್ಥಾನ. ನ್ಯಾಕ್‌ನಿಂದ ಎ++ ದರ್ಜೆ ಪಡೆದು ಹೆಸರು ಮಾಡಿದೆ. ಆದರೆ ಅವ್ಯವಸ್ಥೆಯಿಂದ ಕೂಡಿದ್ದು ದುರಂತವೇ ಸರಿ.