ಅವೈಜ್ಞಾನಿಕ ರಾಜ್ಯೋತ್ಸವ ಸಮಿತಿ ವಜಾಮಾಡಲು ಒತ್ತಾಯಿಸಿ ಮನವಿ

ಮೈಸೂರು, ನ.12: ಅವೈಜ್ಞಾನಿಕವಾಗಿರುವ ರಾಜ್ಯೋತ್ಸವ ಸಮಿತಿಯನ್ನು ಕೂಡಲೇ ವಜಾಮಾಡಿ ವೈಜ್ಞಾನಿಕವಾಗಿ ಜಿಲ್ಲಾ ರಾಜ್ಯೋತ್ಸವ ಅಯ್ಕೆ ಸಮಿತಿಯ ರಚನೆಯನ್ನು ಮಾಡಲು ಒತ್ತಾಯಿಸಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವೇದಿಕೆಯ ಅಧ್ಯಕ್ಷ ಅರವಿಂದ ಶರ್ಮಾ ಮಾತನಾಡಿ ವರ್ಷಕ್ಕೊಮ್ಮೆ ಬರುವ ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾದ ಕನ್ನಡ ರಾಜ್ಯೋತ್ಸವದಲ್ಲಿ ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಹಾಗೂ ರಾಜ್ಯಮಟ್ಟದಲ್ಲೂ ಕನ್ನಡ ಹೋರಾಟಗಾರಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಸರ್ಕಾರದಿಂದ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ಜಿಲ್ಲಾಡಳಿತದಿಂದ ಗೌರವ ನೀಡುತ್ತಾ ಬಂದಿದೆ.
ಜಿಲ್ಲಾ ರಾಜ್ಯೋತ್ಸವದ ಸಾಧಕರ ಅಯ್ಕೆಗೆ ಸಮಿತಿ ಕೂಡ ಇದ್ದು ಪ್ರತೀ ಐದು ವರ್ಷಗಳಿಗೆ ಸದಸ್ಯರ ಬದಲಾವಣೆ ಕೂಡ ಮಾಡಬೇಕೆಂದಿದೆ. ಮೈಸೂರು ಜಿಲ್ಲೆಯ ರಾಜ್ಯೋತ್ಸವ ಆಯ್ಕೆ ಸಮಿತಿಯ ಅವಧಿ ಐದು ವರ್ಷಗಳು ಮೀರಿದ್ದರಿಂದ ಹಾಗೂ ಈ ಸಮಿತಿಯ ರಚನೆ ಅವೈಜ್ಞಾನಿಕವಾಗಿ ಕೂಡಿದ್ದು ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಮೈಸೂರಿನಲ್ಲಿ ರಾಜ್ಯೋತ್ಸವ ಆಯ್ಕೆ ಸಮಿತಿಯನ್ನು ಕೂಡಲೇ ಜಿಲ್ಲಾಡಳಿತ ಬದಲಾವಣೆ ಮಾಡಬೇಕು ಎಂದು ಒತ್ತಾಯಿದರು.
ಈ ಸಂದರ್ಭ ಪರಿಸರ ಸಂರಕ್ಷಣಾ ಸಮಿತಿಯ ಭಾನುಮೋಹನ್ ಉಪಸ್ಥಿತರಿದ್ದರು.