ಅವೈಜ್ಞಾನಿಕ ಡಿವೈಡರ್ ವಾಹನಗಳ ಪರದಾಟ ಕ್ರಮಕ್ಕೆ ಒತ್ತಾಯ

ಕವಿತಾಳ,ಜು.೦೯-
ಪಟ್ಟಣದ ಅಭಿವೃದ್ದಿಗಾಗಿ ಮತ್ತು ಸುರಕ್ಷತೆ ರಸ್ತೆ ಸಂಚಾರಕ್ಕಾಗಿ ಕೆಕೆಆರ್‌ಡಿಬಿ ಯೋಜನೆಯಡಿಯಲ್ಲಿ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ೧.೪೦೦ ಮೀಟರ್ ಉದ್ದದ ಗುಣಮಟ್ಟದ ರಸ್ತೆ ಮತ್ತು ರಸ್ತೆಯ ಮದ್ಯೆ ಡಿವೈಡರ್ ಹಾಗೂ ಬೆಳಕಿಗಾಗಿ ೪೫ ವಿದ್ಯುತ್ ಕಂಬಗಳ ನಿರ್ಮಾಣ ಕಾಮಗಾರಿಗೆ ಅಂದಿನ ಶಾಸಕ ರಾಜ ವೆಂಕಟಪ್ಪನಾಯಕರವರು ೨೭.೧.೨೦೨೨ ರಂದು ಚಾಲನೆಯನ್ನು ನೀಡಿದ್ದರು. ಅಂದು ಚಾಲನೆ ನೀಡದೆ ಇದು ವರೆಗೆ ಮುಖ್ಯ ರಸ್ತೆಯನ್ನು ದುರಸ್ತಿಮಾಡದೆ. ಅಗಲವಿಲ್ಲದೆ ರಸ್ತೆಯಲ್ಲಿ ಕಳಪೆಯಾಗಿ ಡಿವೈಡರ್ ನಿರ್ಮಿಸಿರುವದರಿಂದ ಇಕ್ಕಟ್ಟಿನ ರಸ್ತೆಯಲ್ಲಿ ವಾಹನ ಗಳು ಜೀವವನ್ನು ಕೈಯಲ್ಲಿಡಿದುಕೊಂಡು ಚಲಿವಂತಾಗಿದೆ. ಕೆಲ ಸಲ ವಾಹನಗಳ ಅಪಘಾತವಾಗಿದೆ. ಬಹಳಷ್ಟು ಬೈಕ್ ಸವಾರರು ವಾಹನದಿಂದ ಬಿದ್ದು ಕೈ ಕಾಲು ಮುರಿದುಕೊಂಡಿರುವ ಘಟನೆಯು ಕೂಡ ನಡೆದಿವೆ. ಇದಲ್ಲದೆ ಮಳೆ ಬಂದರೆ ರಸ್ತೆಯು ತಗ್ಗು ಇರುವದರಿಂದ ರಸ್ತೆಯ ತುಂಬ ನೀರು ನಿಂತು ಕೆರೆಯಂತಾಗುತ್ತದೆ. ಬೆಳಗಾಂವ್ ಹೈದ್ರಬಾದ್ ರಾಜ್ಯ ಹೆದ್ದಾರಿಯಾದ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಚಲಿಸುತ್ತವೆ. ಕವಿತಾಳ ದಾಟುವವರೆಗೆ ಎಚ್ಚರಿಕೆಯಿಂದ ವಾಹನ ಚಲಿಸುವಂತಾಗಿದೆ. ರಸ್ತೆ ನಿರ್ಮಿಸುವವರು ಅವಧಿಯೋಳಗೆ ಮುಗಿಸಬೇಕು ಎನ್ನುವ ಕರಾರು ಇಲ್ಲಿ ಪಾಲನೆಯಾಗದೆ. ರಸ್ತೆ ಅಗಲಿಕರಣವಾಗದೆ ರಸ್ತೆಯಲ್ಲಿನ ತಗ್ಗುಗಳು ಮುಚ್ಚದಿರುವದರಿಂದ ಸಮಸ್ಯೆಗೆ ಕಾರಣವಾಗಿದೆ. ಆದಷ್ಟು ಬೇಗ ರಸ್ತೆ ಅಗಲಿಕರಣ ಮಾಡಬೇಕು, ತಗ್ಗುಗಳನ್ನು ಮುಚ್ಚಬೇಕು ಎಂದು ಪಟ್ಟಣದ ನಿವಾಸಿಗಳಾದ ಮೌನೇಶ ಹಿರೆಕುರಬರ, ಬೂದೆಪ್ಪ ಯಾದವ, ಅಮರೇಶ ಯಾದವ, ಅಲ್ಲಮಪ್ರಭು, ಈರಣ್ಣ ಕೆಳಗೇರ, ಜಂಬಣ್ಣ ಸಾಹಿತಿ, ಮೈಬೂಬ ಎಂಡಿ, ಶಿವಕುಮಾರ ಮ್ಯಾಗಳಮನಿ ಸೇರಿದಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೊಟ್ ಕವಿತಾಳ ಅಭಿವೃದ್ದಿಗಾಗಿ ಡಿವೈಡರ್ ನಿರ್ಮಾಣಮಾಡಿರುವದು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಆದರೆ ಕಳಪೆಕಾಮಗಾರಿ ಮಾಡಿ ರುವದರಿಂದ ಡಿವೈಡರ್ ಕಿತ್ತು ಹೋಗುತ್ತಿದೆ. ರಸ್ತೆಯನ್ನು ಅಗಲಿಕರಣ ಮಾಡಿದ ನಂತರ ಕಾಮಗಾರಿ ಮಾಡಬೇಕಾಗಿತ್ತು. ಆದರೆ ಅವಸರವಾಗಿ ಚಿಕ್ಕ ದಾಗ ರಸ್ತೆಯ ಮದ್ಯೆ ಡಿವೈಡರ್ ನಿರ್ಮಿಸಿರುವದರಿಂದ ಇನ್ನು ಉಳಿದ ಕಾಮಗಾರಿ ಮಾಡದಿರುವದರಿಂದ ಸಮಸ್ಯೆಗೆ ಕಾರಣವಾಗಿದೆ.ಮೌನೇಶ ಹಿರೆಕುರಬರ ಮಾಜಿ ಪಪಂ ಸದಸ್ಯ ಕವಿತಾಳ. (ಫೋಟೋ ಇದೆ ೦೧)

ಕೊಟ್,,ಕವಿತಾಳದ ಮುಖ್ಯ ರಸ್ತೆಗೆ ಈ ಮೊದಲು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಗಲಿಕರಣ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯನ್ನು ೬ ವರ್ಷದ ಹಿಂದೆ ನಡೆಸಲಾಗಿತ್ತು. ಆ ಸಮಯದಲ್ಲಿ ರಸ್ತೆಗಳ ಮೇಲಿದ್ದ ಕಟ್ಟಡಗಳನ್ನು ಅವಸರವಾಗಿ ತೆರವುಗೋಳಿಸಲಾಯಿತು. ಆದರೆ ಅಧಿಕಾರಿಗಳು ಅಂದಿನ ಕಾಮಗಾರಿಯನ್ನು ಇನ್ನು ಸರಿಯಾಗಿ ಮಾಡದೆ ವಿದ್ಯುತ್ ಕಂಬಗಳನ್ನು ಇನ್ನು ತೆರವುಗೋಳಿಸಿಲ್ಲ. ಕೆಲವೋಂದು ಕಟ್ಟಡಗಳು ಕೂಡ ತೆರವಾಗಿಲ್ಲ. ಈಗ ಮತ್ತೆ ರಸ್ತೆಗೆ ಡಿವೈಡರ್ ಮಾಡಲಾಗುತ್ತಿದೆ ಇದನ್ನು ಸರಿಯಾಗಿ ಮಾಡದೆ ಹಣ ಕಭಳಿಸುವ ಕಾಮಗಾರಿಯಾಗಬಾರದು.ಬೂದೆಪ್ಪ ಯಾದವ ಕವಿತಾಳ ನಿವಾಸಿ. (ಫೋಟೋ ಇದೆ ೦೨).

ಕೊಟ್,,ಡಿವೈಡರ್ ಬಗ್ಗೆ ಈಗಾಗಲೆ ಬಹಳಷ್ಟು ಜನರು ಆರೋಪಿಸಿದ್ದಾರೆ. ರಸ್ತೆಯ ಮೇಲೆ ನೀರು ನಿಂತಿರುವ ಬಗ್ಗೆ ಗಮನಕ್ಕಿಲ್ಲ ನಮ್ಮ ಸಿಬ್ಬಂದಿಯಿಂಝದ ಮಹಿತಿಯನ್ನು ಪಡೆದು ಮಳೆಯ ನೀರನ್ನು ತೆರವುಗೋಳಿಸಲಾಗುವದು. ಪ.ಪಂ ಮುಖ್ಯಧಿಕಾರಿ ರವಿ ರಂಗಸುಭೆ ಕವಿತಾಳ. (ಫೊಟೋ ಇದೆ ೦೩)

ಕೊಟ್,,ಕವಿತಾಳದಲ್ಲಿ ನಡೆಸಲಾಗುತ್ತಿರುವ ಡಿವೈಡರ್ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ ಅಗಲಿಕರಣ ಮಾಡಿದ ನಂತರ ಕಾಮಗಾರಿಯನ್ನು ಮಾಡಬೇಕಾಗಿತ್ತು. ಅವಸರವಾಗಿ ಬೇಗ ಕಾಮಗಾರಿ ಮುಗಿಸಿ ನಂತರ ಉಳಿದ ಕಾಮಗಾರಿಯನ್ನು ಮಾಡುವ ಯೋಚನೆಯಿತ್ತು. ಗುತ್ಗತೆದಾರರಿಗೆ ಬೇಗ ಕಾಮಗಾರಿಯನ್ನು ಮುಗಿಸುವಂತೆ ಹೇಳಲಾಗುವದು-ರಾಜಕುಮಾರ ಮಾರುತಿ ತೊರವಿ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಮಾನವಿ. (ಪೋಟೋ ಇದೆ ೦೪).

ಕೊಟ್,,ನಾನು ನೂತನವಾಗಿ ಶಾಸಕನಾಗಿದ್ದೇನೆ. ಕವಿತಾಳದ ಅಭಿವ್ರದ್ದಿಗಾಗಿ ಬದ್ದವಾಗಿದ್ದೇನೆ. ಕವಿತಾಳ ಮುಖ್ಯ ರಸ್ತೆಯ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡುವಂತೆ ಕ್ರಮವನ್ನು ಕೈಗೊಳ್ಳುತ್ತೇನೆ. ರಸ್ತೆ ಅಗಲಿಕರಣ, ರಸ್ತೆಯಲ್ಲಿನ ತಗ್ಗುಗಳು, ವಿದ್ಯುತ್ ದೀಪ ಸೇರಿದಂತೆ ಸಮಸ್ಯೆಯನ್ನು ನಿವಾರಿಸುತ್ತೇನೆ.
ಹಂಪಯ್ಯ ಸಾಹುಕಾರ ನಾಯಕ ಶಾಸಕ ಮಾನ್ವಿ.