ಅವೈಜ್ಞಾನಿಕ ಕಾಮಗಾರಿ ನಿಲ್ಲಿಸಲು ಆಗ್ರಹ

ಕೊಟ್ಟೂರು, ಏ.26: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ಕೆಲಸ ನಡೆಯುತ್ತಿದ್ದು ಸ್ಥಳೀಯ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದು ಕಾಮಗಾರಿ ಕೆಲಸವನ್ನು ಈ ಕೂಡಲೇ ನಿಲ್ಲಿಸುವಂತೆ ನಿರ್ಮಿತಿ ಕೇಂದ್ರ ಆರೋಗ್ಯ ಇಲಾಖೆಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 4 ಕಟ್ಟಡಗಳು ನಿರ್ಮಾಣ ಕೊಳ್ಳುತ್ತಿರುವುದು ಪ್ರತಿ ಮೂರು ಲಕ್ಷದಂತೆ ಆರೋಗ್ಯಕ್ಕೆ ಅನುದಾನದಲ್ಲಿ ಬಿಡುಗಡೆಯಾಗಿದ್ದು ವೈದ್ಯಾಧಿಕಾರಿಗಳ ಗಮನಕ್ಕೆ ಬಾರದೆ ಈ ಕಾಮಗಾರಿ ಕೆಲಸ ಹಳೆಯ ಕಟ್ಟಡದ ಕಲ್ಲುಗಳಿಂದ ಮತ್ತು ಎರಡರಿಂದ ಮೂರು ಅಡಿ ಮಾತ್ರ ಬುನಾದಿ ತೆಗೆದು ಕಾಮಗಾರಿ ಕೆಲಸ ಆರಂಭಿಸಿರುವುದರಿಂದ ಸ್ಥಳೀಯ ಸಾರ್ವಜನಿಕರಿಂದ ಕಟ್ಟಡ ಕಾಮಗಾರಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ಈ ಕಾಮಗಾರಿ ಕೆಲಸ ಕುರಿತು ತಾಲೂಕು ವಿದ್ಯಾಧಿಕಾರಿ ಷಣ್ಮುಖ ನಾಯಕ್ ಅವರನ್ನು ಪತ್ರಿಕೆ ಮಾಹಿತಿ ಕೇಳಿದಾಗ ನಮಗೆ ಯಾವುದೇ ಕಾಮಗಾರಿ ಬಗ್ಗೆ ಮಾಹಿತಿ ನೀಡದೆ ಕೊಟ್ಟೂರು ತಾಲೂಕ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾಮಗಾರಿ ಕೈಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪತ್ರಿಕೆಗೆ ತಿಳಿಸಿದರು.
ಕೊಟ್ಟೂರು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಪಿಬಿ ನಾಯಕ್ ಅವರು ಪತ್ರಿಕೆಯೊಂದಿಗೆ ಮಾತನಾಡಿ ಕಾಮಗಾರಿ ಕೆಲಸದಲ್ಲಿ ಲೋಪ ದೋಷವಿದ್ದರೆ ಕೂಡಲೇ ತೆಗೆದುಕೊಳ್ಳುವಂತೆ ಲೇಬರ್ ಕಾಂಟ್ರಾಕ್ಟ್ ಮತ್ತು ನಿರ್ಮಿತಿ ಕೇಂದ್ರ ಇಂಜಿನಿಯರ್ ಗಳಿಗೆ ಈ ಕೂಡಲೇ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.