ಅವೈಜ್ಞಾನಿಕ ಕಾಮಗಾರಿ ಚರಂಡಿ ನೀರು ರಸ್ತೆಯಲ್ಲಿ

(ಸಂಜೆವಾಣಿ ವಾರ್ತೆ)
ಬಳ್ಳಾರಿ ನ 11 : ಅವೈಜ್ಞಾನಿಕ ಕಾಮಗಾರಿಯಿಂದ ತಾಲೂಕಿನ‌ ಕುಡುತಿನಿಯಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿಯತೊಡಗಿದೆ.
 ಇದರಿಂದ ಸಾರ್ವಜನಿಕರು ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳ ಮಧ್ಯೆ ದಿನವು ವಾಗ್ವಾದ, ಇಲ್ಲಿನ 4 ಮತ್ತು 5 ನೇ ವಾರ್ಡಿನ ಮಧ್ಯೆದ ಸಿ.ಸಿ.ರಸ್ತೆ ಮತ್ತು ಚರಂಡಿಯ ಕಾಮಗಾರಿ ಅವೈಜ್ಞಾನಿಕವಾಗಿ ಮಾಡುತ್ತಿರುವುದರಿಂದ ಚರಂಡಿ ನೀರು ರಸ್ತೆಯ ತುಂಬಾ ಆವರಿಸಿ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ ಇದಕ್ಕೆ ಗುತ್ತಿಗೆದಾರನ ಅಸಮರ್ಪಕ, ನಿರ್ಲಕ್ಷ್ಯದ ಕೆಲಸವೇ ಕಾರಣ ಆಗಿದೆ ಎನ್ನಲಾಗುತ್ತಿದೆ.
ಕೆಪಿಸಿಎಲ್ ನಿಂದ ಕೈಗೊಂಡಿರುವ ಈ ಕಾಮಗಾರಿಯ  ಗುತ್ತಿಗೆದಾರರಿಂದ ವೈಜ್ಞಾನಿಕ ಕಾಮಗಾರಿ ಮೂಡಿಸುವ ಮೂಲಕ ಕೆಪಿಸಿಎಲ್ ನ ಅಧಿಕಾರಿಗಳು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಕೋರಿದ್ದಾರೆ.