ಅವೈಜ್ಞಾನಿಕ ಕಾಮಗಾರಿಯನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ : ಜಿ.ಎಸ್. ಗುರುಮೂರ್ತಿ


ಸಂಜೆವಾಣಿ ವಾರ್ತೆ
ಸಂಡೂರು ನ:15  ನಿರಂತರ ಬಸಿನೀರಿನ ಸ್ಥಳದಲ್ಲಿ ನೂತನ ಎತ್ತರದ ಟ್ಯಾಂಕ್ ನಿರ್ಮಾಣ ಅವೈಜ್ಞಾನಿಕವಾಗಿ ಕೂಡಿದೆ. ಗ್ರಾಮ ಪಂಚಾಯಿತಿಯವರು, ಗುತ್ತಿಗೆದಾರರು ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಬೇಕು ಅಲ್ಲದೆ ಸಾರ್ವಜನಿಕರ ಅನುಕೂಲಕ್ಕಾಗಿ ಬೆರೆ ಸ್ಥಳದಲ್ಲಿ ಟ್ಯಾಂಕ್ ನಿರ್ಮಾಣ ಕಾಮಗಾರಿಯನ್ನು ಹಮ್ಮಿಕೊಳ್ಳಬೇಕು ಎಂದು ಹೊಸ ದರೋಜಿ ಗ್ರಾಮದ ಮುಖಂಡ ಜಿ.ಎಸ್. ಶಿವಮೂರ್ತಿಯವರು ಒತ್ತಾಯಿಸಿದರು.
ಅವರು ಸಂಡೂರು ತಾಲೂಕಿನ ತೋರಣಗಲ್ ಹೋಬಳಿಯ ಹೊಸ ದರೋಜಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಗ್ರಾಮದ ಮುಖಂಡರಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅವರು ಮುಂದುವರೆದು ಗ್ರಾಮದ ಜನರು ಕುಡಿಯುವ ನೀರಿಗಾಗಿ ನೂತನ ಎತ್ತರದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಸಂತಸದ ವಿಚಾರವಾಗಿದೆ ಅಲ್ಲದೆ ಸ್ವಾಗತರ್ಹವಾಗಿದೆ. ಆದರೆ ಕಾಮಗಾರಿಯ ಸ್ಥಳದಲ್ಲಿ ನಿರಂತರವಾಗಿ ಬಸಿ ನೀರು ಬರುತ್ತಿದ್ದರಿಂದ ಗುಣಮಟ್ಟದ ಟ್ಯಾಂಕ್ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ, ಇದೇ ಸ್ಥಳದಲ್ಲಿ ಅಂಗನವಾಡಿ ಸರ್ಕಾರಿ ಪ್ರೌಢಶಾಲೆಯಿದ್ದು ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೂ ಆಪಾಯವಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬೇರೆ ಸ್ಥಳದಲ್ಲಿ ಟ್ಯಾಂಕ್ ನಿರ್ಮಾಣ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ನೂತನ ಟ್ಯಾಂಕ್ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ಸ್ಥಳವನ್ನು ಮಾತ್ರ ತೋರಿಸಲಾಗಿದೆ ಆದರೆ ಕಾಮಗಾರಿಗೆ ಸಂಪೂರ್ಣ ಒಪ್ಪಿಗೆ ನೀಡಿಲ್ಲ, ಜನಗಳ ಮತ್ತು ಶಾಲಾ ಮಕ್ಕಳಿಗೆ ಅಧಿಕಾರಿಗಳು ಅನುಕೂಲವಾಗುವಂತೆ ಚರ್ಚೆ ಮಾಡಿ ಬೇರೆ ಸ್ಥಳದಲ್ಲಿ ನೂತನ ಟ್ಯಾಂಕ್ ನಿರ್ಮಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಹೊಸ ದರೋಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಗಣೇಶ್‍ರವರು ಪ್ರತಿಕ್ರಿಯಿಸಿದರು.