ಚನ್ನಮ್ಮನ ಕಿತ್ತೂರು,ಜೂ.15: : ತಾಲ್ಲೂಕಿನ ಕುಲವಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಬಿಷ್ಟಪ್ಪ ಶಿಂಧೆ ಅವರ ವಿರುದ್ಧ ಸದಸ್ಯರು
ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದು ಈ ಹಿನ್ನಲೆಯಲ್ಲಿ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಅವರ
ನೇತೃತ್ವದಲ್ಲಿ ಕುಲವಳ್ಳಿ ಗ್ರಾಮ ಪಂಚಾಯತನಲ್ಲಿ ಸಭೆ ಜರುಗಿತು.
ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 11 ಜನ ಸದಸ್ಯರಿದ್ದಾರೆ
ಅವರಲ್ಲಿ 8 ಜನ ಸದಸ್ಯರು ಜೂನ್ 2 ರಂದು ಅವಿಶ್ವಾಸ ನಿರ್ಣಯ ಮಂಡನೆಗೆ ಅರ್ಜಿ
ಸಲ್ಲಿಸಿದ್ದರು.
ಬೈಲಹೊಂಗಲ ಉಪ ವಿಭಾಗಾಧಿಕಾರಿಗಳ ಕಚೇರಿಯಿಂದ ಅವಿಶ್ವಾಸ ನಿರ್ಣಯ ಮಂಡನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಗೆ ನೋಟಿಸ್ ನೀಡಲಾಗಿದ್ದು, ಸಭೆ ನಡೆಸಲಾಯಿತು. ಸಭೆಗೆ 8 ಜನ ಸದಸ್ಯರು ಹಾಜರಾಗಿದ್ದರು. ಉಳಿದ 3 ಜನ ಗೈರಾಗಿದ್ದರು. ಕೋರಂ ಭರ್ತಿಗೆ ಬೇಕಾಗುವಷ್ಟು ಸದಸ್ಯರು ಹಾಜರು ಇದ್ದ ಕಾರಣ ಅವಿಶ್ವಾಸ ಗೊತ್ತುವಳಿ ಮಂಡಿಸಿದರು.
ಈ ವೇಳೆ ಅವಿಶ್ವಾಸ ಮಂಡನೆಗೆ ಗ್ರಾಮ ಪಂಚಾಯತ ಸದಸ್ಯರಾದ ಕಸ್ತೂರಿ ನಾಯ್ಕರ, ಸಂಜವ್ವ ಲಿಂಗಮೇತ್ರಿ ಸತ್ಯವ್ವ ಮೇಕರಿ, ಭಾರತಿ ಗುಡದಪ್ಪನವರ, ಮಂಜುಳಾ ಮಾಡಿವಾಳರ, ಕುಮಾರ ಹೈಬತ್ತಿ, ನಾಗಪ್ಪ ಅಲಸನ್ನವರ, ಫಕ್ಕಿರ ಮಾಳನ್ನವರ ಮತ ಚಲಾಯಿಸಿದರು.