ಅವಿಶ್ವಾಸ ಗೊತ್ತುವಳಿ ಸಭೆ ಮುಂದೂಡಿಕೆ; ಸದಸ್ಯರ ಅಸಮಾಧಾನ

ಹರಪನಹಳ್ಳಿ.ಸೆ.೨೬; ಶಾಸಕ ಜಿ.ಕರುಣಾಕರ ರೆಡ್ಡಿ ಅವರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಗ್ರಾಮ ಪಂಚಾಯಿತಿಯಲ್ಲಿ ನಡೆಯಬೇಕಿದ್ದ ಅವಿಶ್ವಾಸ ಗೊತ್ತುವಳಿ ಸಭೆ ಮುಂದೂಡಿದ್ದಾರೆ ಎಂದು ತಾಲ್ಲೂಕಿನ ಹಾರಕನಾಳು ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷೆ ಎಲ್. ಸಾವಿತ್ರಿ ಶಶಿಕುಮಾರ್ ದೂರಿದರು.ನನ್ನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಉಪವಿಭಾಗಾಧಿಕಾರಿಗಳಿಗೆ ಕೆಲ ಸದಸ್ಯರು ಮನವಿ ಸಲ್ಲಿಸಿದ್ದರು. ಅದರಂತೆ ಅಧಿಕಾರಿಗಳು ಸೆ.22ರಂದು ಸಭೆ ನಡೆಸುವುದಾಗಿ ನೋಟಿಸ್ ನೀಡಿದ್ದರು. ಆದರೆ ಈಗ ಯಾವುದೇ ಸೂಚನೆ ಇಲ್ಲದೇ ಸಭೆಯನ್ನು ದಿಢೀರ್ ಆಗಿ ಮುಂದೂಡಿರುವುದು ಅನುಮಾನ ತಂದಿದೆ ಎಂದರು.ಸದಸ್ಯರು ನನ್ನ ಪರವಾಗಿ ಇದ್ದು, ಇಂದು ಸಭೆ ನಡೆದಿದ್ದರೆ ಗೊತ್ತುವಳಿ ವಿಫಲವಾಗಿ, ನನಗೆ ಜಯ ದೊರೆಯುತ್ತಿತ್ತು. ಇದರಿಂದ ಭಯಗೊಂಡಿರುವ ವಿರೋಧ ಪಕ್ಷದವರು ಕಾರಣವಿಲ್ಲದೇ ಅಧಿಕಾರಿಗಳ ಮೇಲೆ ಒತ್ತಡ ತಂದು ಸಭೆ ಮುಂದೂಡಿದ್ದಾರೆ ಎಂದು ಆರೋಪಿಸಿದರು. ಮುಖಂಡರಾದ , ಬಸವರಾಜ್, ಶಶಿಕುಮಾರ್ ನಾಯ್ಕ್, ಮಲ್ಲೇಶ್ ನಾಯ್ಕ್, ಪ್ರಕಾಶ್ ನಾಯ್ಕ್, ಶಿವಯೋಗಿ ಕೊಟ್ರೇಶ್, ಹರ‍್ಯಾನಾಯ್ಕ ಇದ್ದರು.