ಅವಿರೋಧ ಆಯ್ಕೆ

(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು26: ತಾಲೂಕಿನ ಕುಮ್ಮೂರು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಲಕ್ಷ್ಮಣ ದುರುಗಪ್ಪ ಹಾವೇರಿ ಮತ್ತು ಉಪಾಧ್ಯಕ್ಷರಾಗಿ ನೀಲವ್ವ ನಾಗಪ್ಪ ಹರಿಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ ಎಸ್.ಎ.ಪ್ರಸಾದ್ ತಿಳಿಸಿದರು.
ಸೋಮವಾರ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ನಡೆದ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ದುರುಗಪ್ಪ ಹಾವೇರಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನೀಲವ್ವ ನಾಗಪ್ಪ ಹರಿಜನ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ರೇಣುಕವ್ವ ತುಮರಿಕೊಪ್ಪ, ಚನಬಸಪ್ಪ ಬಣಕಾರ, ಚನ್ನಪ್ಪ ಕಾಕೋಳ, ಮಾರುತಿ ಕಾಳಪ್ಪನವರ, ಚಂದ್ರಕಲಾ ತಳವಾರ, ಶಾಂತವ್ವ ಲಮಾಣಿ, ಸುಶೀಲವ್ವ ಫಾಸಿ, ಶಾಂತವ್ವ ಅಸುಂಡಿ, ಮುಖಂಡರಾದ ಮಹೇಶಗೌಡ ಪಾಟೀಲ, ನಾಗನಗೌಡ ಪಾಟೀಲ, ಸುಭಾಸ ಮಣ್ಣಪ್ಪನವರ, ರವಿ ಬಾಸೂರ, ವೀರಭದ್ರಗೌಡ ಪಾಟೀಲ, ಗಣೇಶಪ್ಪ ತುಮರಿಕೊಪ್ಪ, ಬಸನಗೌಡ ತಂಗನಗೌಡ್ರ ಗದಿಗೆಪ್ಪ ಲಮಾಣಿ, ಚೆನ್ನಪ್ಪ ದಾಸರ, ಕುಮಾರ ತಳವಾರ, ಪಿಡಿಓ ಗದಿಗೆಪ್ಪ ಕೊಪ್ಪದ ಗ್ರಾಪಂ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.