
ಚನ್ನಮ್ಮನ ಕಿತ್ತೂರ,ಜು 21: ಸಮೀಪದ ಖಾನಾಪೂರ ತಾಲೂಕಿನ ಗಂದಿಗವಾಡ ಗ್ರಾ.ಪಂ.ಗೆ ಎರಡನೇ ಅವಧಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀ ದೇಸಾಯಿ ಅರ್ಜುನ ಗಾಳಿ ಉಪಾಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮೀ ಮಹಾಂತೇಶ ಕಮತಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 22 ಸದಸ್ಯರ ಬಲ ಹೊಂದಿದ ಈ ಗ್ರಾ.ಪಂ.ದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಹಾಗಾಗಿ ಎರಡು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿವೆ.
ಚುನಾವಣಾಧಿಕಾರಿಯಾಗಿ ಖಾನಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ರಾಜೇಶ್ವರಿ ಕುಡಚಿ, ಸಹಾಯಕ ಚುನಾವಣಾಧಿಕಾರಿಯಾಗಿ ಬಾಲರಾಜ ಭಜಂತ್ರಿ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಕಾರ್ಯದರ್ಶಿ ಶಿವಾನಂದ ಜಂಡೇ, ಕಂಪ್ಯೂಟರ್ ಆಪರೇಟರ್ ರಾಘವೇಂದ್ರ ಪರಮಾಜ ಹಾಗೂ ಸರ್ವ ಸದಸ್ಯರು ಮತ್ತು ಸಿಬ್ಬಂದಿಯವರು ಸತ್ಕರಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಗಾಳಿಯವರು ನನ್ನ ಅವಧಿಯಲ್ಲಿ ಜಾತಿ-ಭೇದ ಮರೆತು ಗ್ರಾಮಕ್ಕೆ ನನ್ನಿಂದ ಚ್ಯುತಿ ಬರದ ಹಾಗೇ ನಡೆದುಕೊಳ್ಳುತ್ತೇನೆಂದರು.
ಈ ವೇಳೆ ಸರ್ವ ಸದಸ್ಯರು, ಗ್ರಾಮದ ಹಿರಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.