ಅವಿರೋಧ ಆಯ್ಕೆ


ಮುಂಡಗೋಡ ನ 4 : ಇಲ್ಲಿನ ಪ್ರತಿಷ್ಠಿತ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿ.(ಟಿಎಪಿಸಿಎಂಎಸ್)ದ ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ಜಿ.ಪಂ ಸದಸ್ಯ ರವಿಗೌಡ ಪಾಟೀಲ ಮತ್ತು ಉಪಾಧ್ಯಕ್ಷಾಗಿ ಸಂತೋಷ ಬೋಸಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಲ್ಲಿನ ಟಿಎಪಿಸಿಎಂಎಸ್ ಒಟ್ಟು 14 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 11 ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಜಯ ಸಾಧಿಸಿ ಬಿಜೆಪಿ ತೆಕ್ಕೆಯಲ್ಲಿತ್ತು.
ಸರಕಾರದ ನಾಮ ನಿರ್ದೇಶಕರಾಗಿ ರವಿಗೌಡ ಪಾಟೀಲವರು ಆಯ್ಕೆಯಾದ ಹಿನ್ನೆಲೆ ಅಧ್ಯಕ್ಷ ಸ್ಥಾನಕ್ಕೆ ಅವರು ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸಂತೋಷ ಬೋಸಲೆ ನಾಮಪತ್ರ ಸಲ್ಲಿಸಿದರು ಯಾರು ನಾಮಪತ್ರ ಸಲ್ಲಿಸಿರುವದರಿಂದ ಅವಿರೋಧವಾಗಿ ಆಯ್ಕೆಯಾದರು.
ರಿಟರ್ನಿಂಗ ಅಧಿಕಾರಿ ತಹಶೀಲ್ದಾರ ಶ್ರೀಧರ ಮುಂದಲಮನಿ ಅವರು ಕಾರ್ಯನಿರ್ವಹಿಸಿದರು.