ಅವಿರೋಧ ಆಯ್ಕೆ

ಬ್ಯಾಡಗಿ,ಏ5 : ತಾಲೂಕಿನ ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನಾಗರಾಜ ಗುತ್ತಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಭಾರತೀಯ ಜೀವವಿಮಾ ನಿಗಮದ ಸಭಾಭವನದಲ್ಲಿ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಗರಾಜ ಗುತ್ತಲ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಹಾಗೂ ಉಪಾಧ್ಯಕ್ಷರಾಗಿ ಮಾಲತೇಶ ಕಮ್ಮಾರ, ನಿರ್ದೇಶಕರಾಗಿ ಬಸಯ್ಯ ಹಿರೇಮಠ, ಮಂಜಪ್ಪ ರಂಗಾರಿ, ಬಸವರಾಜ ಮಂಗೋಜಿ, ಗುಡ್ಡಪ್ಪ ಅಂಗರಗಟ್ಟಿ (ಹಾನಗಲ್) ಮಂಜುಳಾ ಗುತ್ತಲ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಜಿ.ಬಿ.ಲೋಕೇಶ ಘೋಷಿಸಿದರು.
ಈ ಸಂದರ್ಭದಲ್ಲಿ ಪತ್ತಿನ ಸಹಕಾರಿ ಸಂಘದ ಆಡಳಿತಾಧಿಕಾರಿ ರೇಣುಕಾ ಎಂ.ಎಸ್, ಕಾರ್ಯದರ್ಶಿ ಸೋಮಣ್ಣ ಅನ್ವೇರಿ ಉಪಸ್ಥಿತರಿದ್ದರು.