ಅವಿರೋಧ ಆಯ್ಕೆ ಜವಾಬ್ದಾರಿ ಹೆಚ್ಚಾಗುವಂತೆ ಮಾಡಿದೆ:ಮಹಾದೇವಪ್ಪ

ಸೈದಾಪುರ:ಎ.17:ಇಲ್ಲಿಗೆ ಸಮೀಪದ ಕಡೇಚೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಿರ್ಧೇಶಕರಾಗಿ ಅವಿರೋಧ ಆಯ್ಕೆಯಾದ ಮಹಾದೇವಪ್ಪ ದದ್ದಲ ಅವರನ್ನು ಸೈದಾಪುರದಲ್ಲಿ ಆತ್ಮೀಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನೂತನ ನಿರ್ಧೇಶಕ ಮಹಾದೇವಪ್ಪ ದದ್ದಲ ಮಾತನಾಡಿ, ಅವಿರೋಧ ಆಯ್ಕೆ ನನ್ನ ಜವಬ್ದಾರಿ ಹೆಚ್ಚಾಗುವಂತೆ ಮಾಡಿದೆ. ಸರಕಾರದ ರೈತ ಪರವಾದ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ತಲುಪುವಂತೆ ಮಾಡುವಲ್ಲಿ ಪ್ರಯತ್ನ ಮಾಡುತ್ತೇನೆ. ಅನ್ನದಾತರ ಸೇವೆ ಮಾಡುವ ಅವಕಾಶ ದೊರೆತಿರುವುದನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಮಾಡಿಕೊಂಡು ಹಿರಿಯರ, ಗ್ರಾಮಸ್ಥರ ಸಲಹೆ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಆತ್ಮೀಯರ ಬಳಗದ ಕರಬಸಯ್ಯ ದಂಡಿಗಿಮಠ, ಕೀಶನ.ಬಿ.ರಾಠೋಡ, ಹಣಮರೆಡ್ಡಿ ಮೋಟ್ನಳ್ಳಿ, ಸಿದ್ದು ಪೂಜಾರಿ, ಭೀಮಣ್ಣ ಮಡಿವಾಳ, ಶಂಕರೆಡ್ಡಿಗೌಡ ಬಿಳ್ಹಾರ, ಹೊನ್ನಪ್ಪ ಸಗರ ಸೇರಿದಂತೆ ಇತರರಿದ್ದರು.