
ಹರಿಹರ – ಜು- 9 : ನಂದಿಗಾವಿ ಗ್ರಾಮ ಪಂಚಾಯತಿಯ ಅಧ್ಯಕ್ಷರ ಗಾದಿಗೆ ನಡೆದ ಚುನಾವಣೆಯಲ್ಲಿ ಜಿ ಎನ್ ಕವಿತ ಟಿ ಅರ್ ಹೂಗಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಶಾರದಮ್ಮ ಚೌಡಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷರು ನಂದಿಗಾವಿ ಇವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಿಯಮಾನುಸಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರ ಹುದ್ದೆಗೆ ಜಿ ಎನ್ ಕವಿತಾ ಟಿ ಅರ್ ಹೂಗಾರ್ ಒಬ್ಬರೇ ನಾಮ ಪತ್ರ ಸಲ್ಲಿಸಿ, ಅದು ಸಿಂಧುವಾದ ಕಾರಣ ಚುನಾವಣಾಧಿಕಾರಿಗಳು ಅವರ ಅವಿರೋಧ ಆಯ್ಕೆಯನ್ನು ಖಚಿತಪಡಿಸಿದರು.ಗ್ರಾಮ ಪಂಚಾಯತಿ ವ್ಯಾಪ್ತಿಯ ನಂದಿಗಾವಿ, ಧೂಳೆಹೊಳೆ, ಬಿಳಸನೂರು, ಹೊಸಹಳ್ಳಿ ಗ್ರಾಮಗಳ 13 ಸದಸ್ಯರ ಪೈಕಿ ಎ ಎನ್ ರಾಜಣ್ಣ, ಹನುಮಂತರೆಡ್ಡಿ, ಮಹಾಂತೇಶ, ಕವಿತಾ ನಾಗರಾಜ್, ಚನ್ನಯ್ಯ ಜಿ ಎಂ, ಗೀತಮ್ಮ, ಶಿಲ್ಪ, ರಾಜೇಶ್ವರಿ , ರಾಮಪ್ಪ, ರಶ್ಮಿ ಅಜ್ಜಣ್ಣ ಹಾಜರಿದ್ದು ಬಿಳಸನೂರಿನ ಓರ್ವ ಸದಸ್ಯ ನಂದ್ಯಪ್ಪ ಇವರು ಗೈರುಹಾಜರಾಗಿದ್ದರು.ಚುನಾವಣಾಧಿಕಾರಿ ಪಿ ಡಬ್ಲ್ಯೂ ಡಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಿವಮೂರ್ತಿ .ಕಾರ್ಯನಿರ್ವಹಿಸಿದರು ಇದೇ ಸಂದರ್ಭದಲ್ಲಿ ಗ್ರಾಮದ ನೂರಾರು ಜನ ಹಾಜರಿದ್ದು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.