ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ನಿಲ್ಲದ ಕರೋನಾ ಸಾವು ಹಳ್ಳಿಗಳಲ್ಲಿ ವ್ಯಾಪಿಸುತ್ತಿರುವ ಸೋಂಕು

ಬಳ್ಳಾರಿ ಮೇ 03 : ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಸಾವು ನಿಲ್ಲದಾಗಿದೆ. ದಿನಾಲು ಸಾವಿನ ಸಂಖ್ಯೆ ಹೆಚ್ಚುತ್ತಿದೆ. ನಿನ್ನೆ ಮತ್ತೆ 18 ಜನ ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದಲ್ಲಿ 79 ಜನ ಸಾವನ್ನಪ್ಪಿದ್ದಾರೆ. ಜೊತೆಗೆ 1156 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು. ಈಗ ಸೋಂಕು ಗಹಳ್ಳಿಗಳಿಗೂ ವ್ಯಾಪಿಸಿರುವುದು ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗುತ್ತಿದೆಂದು ಹೇಳಬಹುದು.
ನಿನ್ನೆಯ 18 ಜನ ಸೇರಿ ಎರಡನೇ ಅಲೆಯಲ್ಲಿ 157 ಜನ ಮತ್ತು ಇಲ್ಲಿವರೆಗೆ 753 ಜನ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ನಿನ್ನೆ 3454 ಜನರನ್ನು ಪರೀಕ್ಷೆ ಮಾಡಿದ್ದು ಅವರಲ್ಲಿ 1156 ಜನರಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು. ಇದರಿಂದಾಗಿ ಜಿಲ್ಲೆಯಲ್ಲಿ 10304 ಜನರು ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಮತ್ತು ಹೋಮ್ ಐಸೊಲೇಷನ್ ನಲ್ಲಿದ್ದಾರೆ.
ನಿನ್ನೆ 365 ಜನ ಗುಣಮುಖರಾಗಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 53931 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 42874 ಜನರು ಗುಣಮುಖರಾಗಿದ್ದಾರೆ.
ಸಧ್ಯ ಬಳ್ಳಾರಿಯಲ್ಲಿ 4545 , ಸಂಡೂರು 1408, ಹೊಸಪೇಟೆ 1696 ಜನರಲ್ಲಿ ಸೋಂಕು ದೃಡಪಟ್ಟವರು ಇದ್ದಾರೆ. ಕೂಡ್ಲಿಗಿ ಮತ್ತು ಹರಪನಹಳ್ಳಿ ತಾಲೂಕಿನಲ್ಲಿ ಕಡಿಮೆ ಇದೆ.
ಸೋಂಕು ಈಗ ಹಳ್ಳಿಗಳಿಗೆ ವ್ಯಾಪಿಸಿದೆ. ತಾಲೂಕಿನ ಶಂಕರ ಬಂಡೆ ಗ್ರಾಮದಲ್ಲಿ ಇದು ವ್ಯಾಪಿಸಿದ್ದು ಇಬ್ಬರು ಬಲಿಯಾಗಿದ್ದಾರೆ. ಕೋಳೂರು ಗ್ರಾಮದಲ್ಲಿಯೂ ಓರ್ವ ಮೆಣಸಿನಕಾಐಇ ವ್ಯಾಪಾರಿ ಕೋವಿಡ್‍ಗೆ ಬಲಿಯಾಗಿದ್ದಾನೆ. ಸಂಡೂರು ತಾಲೂಕಿನ ಚೋರನೂರು ಗ್ರಾಮದಲ್ಲಿಯೂ 50 ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾನಿಸಿಕೊಂಡಿದೆ. ಹೀಗೆ ಜಿಲ್ಲೆಯ ನಾನಾ ಃಳ್ಳಿಗಳಲ್ಲಿ ಸೊಂಕು ವ್ಯಾಫಿಸುತ್ತಿದ್ದು. ಅವರು ಕೂಡಲೇ ಆಸ್ಪತ್ರೆಗೆ ಬರದೆ ಕೊನೆ ಹಂತದಲ್ಲಿ ಬರುವುದರಿಂದ ಸಾವನ್ನಪ್ಪುವುದು ಹೆಚ್ಚುತ್ತಿದೆ ಎನ್ನುತ್ತಿದೆ. ಆರೋಗ್ಯ ಇಲಾಖೆ. ಅದಕ್ಕಾಗಿ ಜನತೆ ಸೋಂಕಿನ ಲಕ್ಷಣಗಳು ಕಂಡು ಬಂದ ತಕ್ಷಣ ಆಸ್ಪತ್ರೆಗೆ ಬರಲು ಸೂಸಿಸಿದೆ.