ಅವಿಭಜಿತ ಜಿಲ್ಲೆಯಲ್ಲಿ ಮತ್ತೆ ಮುಂದಿನ ವಾರ ಐದು ದಿನ ಸಂಪೂರ್ಣ ಲಾಕ್‍ಡೌನ್

ಬಳ್ಳಾರಿ, ಮೇ.29: ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿನ ಕೋವಿಡ್ ಸೋಂಕು ಕಡಿಮೆ ಮಾಡಲೆಂದು ಜಿಲ್ಲಾಡಳಿತ ಕಳೆದ ಮೂರು ವಾರಗಳಿಂದ ಜಾರಿಗೆ ತಂದಿರುವ ವಾರದಲ್ಲಿನ ಐದು ದಿನಗಳ ಸಂಪೂರ್ಣ ಲಾಕ್‍ಡೌನ್ ನನ್ನು ಮತ್ತೊಂದು ವಾರ ಮುಂದುವರಿಸಿ ಇಂದು ಆದೇಶ ಹೊರಡಿಸಿದೆ.
ಕಳೆದ ವಾರಗಳಂತೆ ನಾಡಿದ್ದು ಮೇ31 ಮತ್ತು ಜೂನ್ 1 ರಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ವರೆಗೆ ಮಾತ್ರ ದಿನಸಿ ಖರೀದಿಗೆ ಜನತೆಗೆ ಅವಕಾಶ ನೀಡಲಾಗಿದೆ. ಮೇ 1 ರ ಮಧ್ಯಾಹ್ನ 12 ರಿಂದ ಮತ್ತೆ ಜೂನ್ 7 ರ ಬೆಳೆಗ್ಗೆ 6 ಗಂಟೆ ವರೆಗೆ ಸಂಪೂರ್ಣ ಲಾಕ್ ಡೌನ್ ನಿಯಮಗಳು ಜಾರಿಯಲ್ಲಿರಲಿವೆ. ನಾಡಿದ್ದು ಮತ್ತು ಜೂನ್ ಒಂದರಂದು ಬೆಳಿಗ್ಗೆ ಯಿಂದ ಮಧ್ಯಾಹ್ನ 12 ವರೆಗೆ ದಿನಸಿ, ಬೇಕರಿ, ಮದ್ಯ ಮಾರಾಟದ ಅಂಗಡಿಗಳು ತೆರೆಯಲಿವೆ.
ಜಿಲ್ಲೆಯಲ್ಲಿ ಈಗ ಕರೋನ್ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ ಸಾವಿನ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಅದಕ್ಕಾಗಿ ಮತ್ತೊಂದು ವಾರ ಜಾರಿಗೆ ಜಿಲ್ಲಾಡಳಿತ ನಿರ್ಧರಿಸಿದೆ. ಮೆಡಿಕಲ್ ಷಾಪ್ ಮತ್ತು ಆಸ್ಪತ್ರೆಗಳು, ಆರೋಗ್ಯ ಪರೀಕ್ಷೆಗೆ ಸಂಬಂಧಿಸಿದವುಗಳು ಈ ಮೊದಲಿನಂತೆ ಇರಲಿವೆ. ತರಕಾರಿ ಮತ್ತು ಹಣ್ಣನ್ನು ತಳ್ಳುವ ಗಾಡಿಯಲ್ಲಿ ಓಣಿಗಳಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಕಾರ್ಮಿಕರು ಅಲ್ಲಿಯೇ ಇದ್ದು ಮಾಡಬಹುದಾಗಿದೆ. ಬ್ಯಾಂಕ್, ಎಟಿಎಂ. ತೆರೆದಿರಲಿವೆ.ಹಾಲು, ಡೈರಿ ಹಾಗೂ ಹಾಲಿನ ಬೂತುಗಳು ಮತ್ತು ಮೊಟ್ಟೆಗಳ ಅಂಗಡಿಗಳು. ಕೃಷಿಗೆ ಸಂಬಂಧಿಸಿದ ಅಗತ್ಯ ವಸ್ತುಗಳು / ಉಪಕರಣಗಳ ಅಂಗಡಿಗಳನ್ನು ಪ್ರತಿ ದಿನ ಬೆಳ್ಳಿಗೆ 6 ಗಂಟೆಯಿಂದ ಬೆಳ್ಳಿಗೆ 10 ಗಂಟೆಯವರೆಗೆ ತೆರೆಯಲು ಹೋಟಲ್, ರೆಸ್ಟೋರೆಂಟ್‍ಗಳು ಗ್ರಾಹಕರ ಮನೆ ಬಾಗಲಿಗೆ ವಿತರಿಸಲು ಅವಕಾಶ ನೀಡಿದ್ದು ರಾತ್ರಿ ವಸತಿ ರಹಿತ ನಿರ್ಗತಿಕರ ಕೇಂದ್ರ ವೃದ್ಧಾಶ್ರಮ, ಬಾಲಮಂದಿರ, ಬಾಲಾಶ್ರಮ, ಅನಾಥಾಶ್ರಮ,ಇವುಗಳಿಗೆ ಅನುಮತಿಸಲಾಗಿದೆ.