ದಾವಣಗೆರೆ.ಜೂ.23; ದಾವಣಗೆರೆ ಮೂಲದವರಾದ ದೇಶದ ಯುಪಿಎಸ್.ಸಿ ಟಾಪರ್ ಗಳಲ್ಲೊಬ್ಬರಾದ ಹಾಗೂ ಕರ್ನಾಟಕದ ಪ್ರಥಮ ರ್‍ಯಾಂಕ್ ಪಡೆದ ಅವಿನಾಶ್ ವಿ ರಾವ್ ರವರು ಪ್ರಸಕ್ತ ಸಾಲಿನ ರಾಷ್ಟ್ರಮಟ್ಟದ ಐ.ಎಫ್ .ಎಸ್.ತರಬೇತಿಯಲ್ಲಿನ ಅತ್ಯುತ್ತಮ ಸಂಶೋಧನೆಗಾಗಿ ಚಿನ್ನದ ಪದಕವನ್ನು ಭಾರತದ ವಿದೇಶಾಂಗ ಸಚಿವರಾದ ಡಾ. ಎಸ್ ಜಯಶಂಕರ್ ರವರಿಂದ ನವ ದೆಹಲಿಯಲ್ಲಿ ಪಡೆದರು. ಅವಿನಾಶ್ ರಾವ್ ದಾವಣಗೆರೆಯ ಖ್ಯಾತ ಹೋಟೆಲ್ ಉದ್ಯಮಿ ಕೆ ವಿ ಆನಂದ್ ರಾವ್ ರವರ ಮೊಮ್ಮಗ ಹಾಗೂ ವಿಠಲರಾವ್ ಸ್ಮಿತಾ ರಾವ್ ರವರ ಸುಪುತ್ರರು.