ಅವಿದ್ಯಾವಂತನಾದ ನಾನು ವಿದ್ಯಾವಂತರಿಗೆ ಕಲಿಸುತ್ತೇನೆ:ಬಲ್ಲಿದ

ಸೈದಾಪುರ:ಸೆ.23:ಅವಿದ್ಯಾವಂತನಾದ ನಾನು ಪೆನ್ನು, ಪೆನ್ಸಿಲ್ ಮುಟ್ಟದೆ 16 ವರ್ಷಗಳ ಕಾಲ ಎಮ್ಮೆ ಕಾಯುವ ಕಾಯದಲ್ಲಿ ತೊಡಿಗಿ ಈದೀಗ ದೇಶ ವಿದೇಶಗಳ ವಿದ್ಯಾವಂತರಿಗೆ ಇಂಗ್ಲೀಷ ಕಲಿಸುವ ಸಾಮಾಥ್ರ್ಯ ಪಡೆದುಕೊಂಡಿದ್ದೇನೆ. ಇದಕ್ಕೆ ಕಲಿಕೆಯ ಆಸಕ್ತಿ ಕಾರಣವಾಗಿದೆ ಎಂದು ರಮೇಶ ಬಲ್ಲಿದ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಸಂಸ್ಥೆಯ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಶಿಕ್ಷಣ ಸರ್ಟಿ ಪೀಕೆಟಿಗೆ ಮಾತ್ರವಾಗದೆ ಜ್ಞಾನಕ್ಕಾಗಿ ಕಲಿಯಬೇಕು. ಇದರಿಂದ ಪರೀಕ್ಷೆಯಲ್ಲಿ ಪೇಲಾದರೂ ಜೀವನದಲ್ಲಿ ಯಶಸ್ವಿಯಾಗುತ್ತವೆ. ಕಲಿಸುವವನೆ ಕಲಿಯುವವನು, ಕಲಿಯುವವನೆ ಕಲಿಸುವನಾಗಬೇಕು. ನಮ್ಮ ತಂದೆ ತಾಯಿಗೆ 9 ಜನ ಮಕ್ಕಳಿದ್ದು ಬಡತನ ನಮಗೆ ತೊಂದರೆಯಾದಾಗ ಇದನ್ನೆ ಸವಾಲಾಗಿ ಸ್ವೀಕರಿಸಿ ಜ್ಞಾನ ಸಂಪಾದನೆಗಾಗಿ ಪ್ರಯತ್ನ ಮಾಡಿ ಇಲ್ಲಿಯವರೆಗೆ 4ಲಕ್ಷ 85 ಸಾವಿರ ವಿದ್ಯಾವಂತರಿಗೆ ಪಾಠ ಮಾಡಿದ್ದೇನೆ. ಇದೊಂದು ಸವಾಲಾಗಿದೆ ಎಂದು ಹೇಳಿದರು. ಸಾಮಾಜಿಕ ಜಾಲಾತಾಣಗಳಲ್ಲಿ ಸಮಯ ವ್ಯಯಮಾಡದೆ ಉತ್ತಮ ಸಾಧನೆಗೆ ಪ್ರಯತ್ನ ಮಾಡುವ ಮೂಲಕ ಕೆಲಸ ಕೇಳುವ ವ್ಯಕ್ತಗಳಾಗದೆ ಕೆಲಸ ಕೊಡುವವರು ನಾವಾಗಬೇಕು. ಆ ಮೂಲಕ ಮಕ್ಕಳು ದೇಶದ ಆಸ್ತಿಯಾಗಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲರಾದ ಜಿ.ಎಂ.ಗುರುಪ್ರಸಾದ, ಹಂಪಣ್ಣ ಸಜ್ಜನಶೆಟ್ಟಿ, ಕರಬಸಯ್ಯ ದಂಡಿಮಠ ಸೇರಿದಂತೆ ಇತರರಿದ್ದರು. ಉಪನ್ಯಾಸಕ ಚಂದ್ರಶೇಖರ ಡೊಣ್ಣೆಗೌಡ ಸ್ವಾಗತಿಸಿದರು. ಶಿಕ್ಷಕ ಕಾಶಿನಾಥ ಶೇಖಸಿಂದಿ ನಿರೂಪಿಸಿದರು. ಸಂಗಾರೆಡ್ಡಿ ವಂದಿಸಿದರು.
ಯಾವುದೆ ಔಪಾಚಾರಿಕ ಶಿಕ್ಷಣ ಪಡೆಯದೆ. ಕಲಿಕೆಯನ್ನು ಆಸಕ್ತಿದಾಯಕ ಮಾಡಿಕೊಂಡು ಇಂಗ್ಲೀಷದಲ್ಲಿ ಉತ್ತಮ ಸಾಧನೆ ಮಾಡಿದ ರಮೇಶ ಬಲ್ಲಿದ ಅವರ ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಈ ವಿದಧ ಕಾರ್ಯಕ್ರಮ ಬಹಳ ಮಹತ್ವದ್ದಾಗಿದೆ. ಗುರಿ ಮತ್ತು ಪರಿಶ್ರಮ ನಮ್ಮದಾಗಿದ್ದಾರೆ ಉತ್ತಮ ಸಾಧನೆ ನಮ್ಮದಾಗುತ್ತದೆ ಎಂಬುವುದಕ್ಕೆ ಬಲ್ಲಿದರವರು ಸಾಕ್ಷಿಯಾಗಿದ್ದಾರೆ.

               ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಧ್ಯಕ್ಷರು ವಿದ್ಯಾ ವರ್ಧಕ ಸಂಘ ಸೈದಾಪುರ