ಅವಾಚ್ಯ ಶಬ್ದಗಳ ಬಳಕೆ ಕಾಂಗ್ರೆಸ್ ವಿರುದ್ದ ಬಿಜೆಪಿ ದೂರು

ಬಳ್ಳಾರಿ, ಏ.23: ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಕಾಂಗ್ರೆಸ್ ಮುಖಂಡರ ವಿರುದ್ಧ ಗುಂಡಾಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿಯ ಎಸ್ಟಿ ಮೋರ್ಚಾದ ಕಾರ್ಯದರ್ಶಿ ಬಿ.ಶೀವಕುಮಾರ್ ಎಸ್ಪಿ ಅಡಾವತ್ ಅವರಿಗೆ ಮನವಿ ಮಾಡಿದ್ದಾರೆ.
ಶಾಸಕ ಗಾಲಿ ಸೋಮಶೇಖರರೆಡ್ಡಿ ಅವರ ವಿರುದ್ಧ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಜೆ.ಎಸ್, ಅಂಜಿನೇಯಲು ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು. ಅವರ ಪದಗಳ ಬಳಕೆ ಕಾಂಗ್ರೆಸ್ ಗುಂಡಾ ಸಂಸ್ಕೃತಿ ಎಂಬುದನ್ನು ಸಾಬೀತುಪಡಿಸಿದೆ.
ಈ ಹಿಂದೆ ಸಚಿವ ಶ್ರೀರಾಮುಲು ಅವರ ವಿರುದ್ಧ ಬಹಿರಂಗವಾಗಿ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದರು. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದರೂ ಇಲ್ಲಿಯವರಿಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈಗ ಶಾಸಕ ಸೋಮಶೇಖರರೆಡ್ಡಿ ಅವರಿಗೆ ತೀರಾ ಕೆಟ್ಟ ಪದಗಳನ್ನು ಬಳಸುವುದರ ಜೊತೆಗೆ ತಾಕತ್ತಿದ್ದರೆ ನಗರದ ರಾಯಲ್ ವೃತ್ತಕ್ಕೆ ಬನ್ನಿ ನಂದು ನಿಂದು ತಾಕತ್ತು ಎಷ್ಟಿದೆ ಎಂಬುದನ್ನು ನೋಡಿಯೇ ಬಿಡೋಣ" ಎಂದು ಬಹಿರಂಗ ಸಭೆಯಲ್ಲಿ ಸವಾಲು ಹಾಕಿ ಬೆದರಿಕೆ ಹಾಕಿದ್ದಾರೆ. ಒಬ್ಬ ಚುನಾಯಿತ ಜನಪ್ರತಿನಿಧಿಗಳಿಗೆ ಈ ರೀತಿ ಬಹಿರಂಗವಾಗಿ ಧಮ್ಕಿ ಹಾಕಿರುವುದು ಕಾನೂನು ಬಾಹಿರವಾಗಿದೆ.ಬಳ್ಳಾರಿ ಏನ್ ನಿಮ್ಮಪ್ಪಂದಲ್ಲ, ಬಾರೋ ಒಂದು ಕೈನೋಡಿಯೇ ಬಿಡ್ತಿನಿ” ಎಂದು ಬೆದರಿಕೆ ಹಾಕಿದ ಆಂಜಿನೇಯಲು ರವರ ವಿರುದ್ಧ ಜಿಲ್ಲಾ ಪೊಲೀಸ್ ಅಧಿಕಾರಿಗಳು ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.
ಇಂತಹ ವ್ಯಕ್ತಿಗಳಿಂದ ಯಾವುದೇ ಪಕ್ಷ ಬೇಧವಿಲ್ಲದೆ ಚುನಾವಣೆಯಲ್ಲಿ ಜಿದ್ದಾಜಿದ್ದಿ ಬಿಟ್ಟು, ಉಳಿದ ದಿನಗಳಲ್ಲಿ ನಾವೆಲ್ಲರೂ ಸಮಯದಲ್ಲಿ ಸಹೋದರರಂತೆ ಇರುವ ನಮ್ಮ ಬಳ್ಳಾರಿ ಜನರ ಮಧ್ಯೆ ಬೆಂಕಿ ಹಚ್ಚಿ ಶಾಂತಿ, ನೆಮ್ಮದಿಗೆ ಧಕ್ಕೆ ತರಲು ಮುಂದಾಗಿರುವ ಇವರನ್ನು ಕೂಡಲೇ ಗಡಿಪಾರು ಮಾಡಬೇಕು. ನಿರ್ಲಕ್ಷಿಸಿದರೆ ಮುಂದಿನ ದಿನ ಹೋರಾಟದ ಸ್ವರೂಪ ಬದಲಾಗುತ್ತದೆ ಎಂದು ಹೇಳಿದ್ದಾರೆ.