ಅವಾಚ್ಯ ಶಬ್ದಗಳಿಂದ ವಿಸ್ತೀರ್ಣಾಧಿಕಾರಿ ವಿರುದ್ದ ಕೇಸ್ ದಾಖಲಿಸಲು ಜಿಲ್ಲಾಧಿಕಾರಿಗೆ ಮನವಿ

ಶಹಾಪುರ:ನ.11:ತನಿಖೆ ಮಾಹಿತಿ ಕೇಳಲು ಕರೆ ಮಾಡಿ ಸಂಪರ್ಕಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕುತ್ತಿರುವ ಕೈಗಾರಿಕಾ ವಿಸ್ತೀರ್ಣಾಧಿಕಾರಿಯಾದ ಶಂಕರರೆಡ್ಡಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಅಖಿಲ ಕರ್ನಾಟಕ ಡಾ. ಈ ಪರಮೇಶ್ವರ ಯುವ ಸೈನ್ಯದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶಹಾಪುರ ತಾಲೂಕಿನ ಬೀರನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಕಾಟಮನಹಳ್ಳಿ ಗ್ರಾಮದ ಅಂಗನವಾಡಿಗೆ ಶೌಚಾಲಯ ನಿರ್ಮಾಣ ಮಾಡಿರುವುದಾಗಿ 2020-21 ಸಾಲಿನ 15 ನೇ ಹಣಕಾಸು ಯೋಜನೆಯಡಿಯಲ್ಲಿ 48179 ರೂ ಬೋಗಸ್ ಬಿಲ್ ಮಾಡಲಾಗಿದೆ ಎಂದು ಜುಲೈ 28 ರಂದು ತಾ.ಪಂ. ಕಾರ್ಯನಿರ್ವಾಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಮನವಿಯ ಆಧಾರದ ಮೇರೆಗೆ ಜಿ.ಪಂ ವತಿಯಿಂದ ಆಗಷ್ಟ 5 ರಂದು ಶಹಾಪುರದ ಕೈಗಾರಿಕಾ ವಿಸ್ತರಣಾಧಿಕಾರಿಯಾದ ಶಂಕರೆಡ್ಡಿಯವರನ್ನು ತನಿಖಾಧಿಕಾರಿಯಾಗಿ ನೇಮಿಸಿ 7 ದಿನಗಳಲ್ಲಿ ವರದಿ ಸಲ್ಲಿಸಲು ಆದೇಶಿಸಿದ್ದರು. ಆದರೆ ತನಿಖೆ ಕೈಗೊಳ್ಳದೆ ಬ್ರಷ್ಟಾಚಾರದಲ್ಲಿ ಅಮಾನತ್ತಾದ ಪಿ.ಡಿ.ಓ ಜೊತೆ ಶಾಮಿಲಾಗಿ ನಕಲಿ ದಾಖಲೆ ಸೃಷ್ಟಿಸಿ 3 ತಿಂಗಳ ನಂತರ ವರದಿ ಸಲ್ಲಿಸಿದ್ದಾರೆ. ತನಿಖಾ ವರದಿ ಕೇಳಲು ಕರೆ ಮಾಡಿದ ಪರಮೇಶ್ವರ ಸಂಘದ ಜಿಲ್ಲಾಧ್ಯಕ್ಷ ಮೌನೇಶ ಜಾರಕಿಹೊಳಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಜೊತೆಗೆ ಗ್ರಾಮ ಪಂಚಾಯತಗೆ ಅಧಿಕಾರಿ ಬಂದಾಗ ಜಾತಿ ನಿಂದನೆ ಮಾಡಿದ್ದರು ಎಂದು ಜಾರಕಿಹೊಳಿ ತಿಳಿಸಿದರು. ಪಾರದರ್ಶಕ ತನಿಖೆ ಮಾಡಿ ವರದಿ ಸಲ್ಲಿಸಬೇಕಾದ ಇವರು ಬ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವುದರ ಜೊತೆಗೆ ವರದಿ ಕೇಳಲು ಕರೆ ಮಾಡಿರುವ ನನಗೆ ಜೀವ ಬೆದರಿಕೆ ಹಾಕಿರುವ ಅಧಿಕಾರಿಗೆ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.