ಅವಹೇಳನ ಹೇಳಿಕೆ:ದೂರು ದಾಖಲು


ಸಂಜೆವಾಣಿ ವಾರ್ತೆ
ಹರಪನಹಳ್ಳಿ (ವಿಜಯನಗರ ಜಿಲ್ಲೆ), ಜ.23: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ‌ ದಿನದಂದೇ ಸಂವಿಧಾನಕ್ಕೆ ಅವಹೇಳನ ಮಾಡುವ ಹೇಳಿಕೆ ಬರೆದು ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬನ ವಿರುದ್ಧ ಅರಸೀಕೆರೆ  ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.
ಧರ್ಮ, ಸಂವಿಧಾನದ‌ ಹೆಸರಿನಲ್ಲಿ ಬೇರೆ ಬೇರೆ ವರ್ಗಗಳ‌ ನಡುವೆ ವೈಮನಸ್ಸು ಉಂಟುಮಾಡುವ ಹೇಳಿಕೆ ಹಿನ್ನೆಲೆಯಲ್ಲಿ ಕಂಚಿಕೇರಿ ಗ್ರಾಮದ ಆಲತ್ತಿ ಲೊಕೇಶ್ (24) ವಿರುದ್ಧ ಸೆಕ್ಷನ್ 505 (2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
‘ಆರೋಪಿ ತನ್ನ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಧರ್ಮ, ಜಾತಿ ಮತ್ತು ಸಂವಿಧಾನಕ್ಕೆ ಸಂಬಂಧಪಟ್ಟಂತೆ ಅವಹೇಳನ ರೀತಿಯಲ್ಲಿ ಬರೆದು ಪೋಸ್ಟ್ ಮಾಡಿದ್ದ. ಖಚಿತ ಮಾಹಿತಿ ಪಡೆದು ಆತನ ವಿರುದ್ಧ  ಸ್ವಯಂ ಪ್ರೇರಿತ ದೂರು‌ ದಾಖಲಿಸಲಾಗಿದೆ‌’ ಎಂದು ಎಸ್‌ಪಿ ಶ್ರೀಹರಿಬಾಬು ತಿಳಿಸಿದರು.