ಅವಹೇಳನಕಾರಿ ಭಾಷಣ ಯತ್ನಾಳ್, ಕಾಶಪ್ಪನವರ ವಿರುದ್ಧ ಆಕ್ರೋಶ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ನ.08 ಇತ್ತೀಚೆಗೆ ಕಾರ್ಯಕ್ರಮದಲ್ಲಿ ಬಣಜಿಗ ಸಮಾಜದ ಬಗ್ಗೆ ಅವ ಹೇಳನಕಾರಿ ಭಾಷಣ ಮಾಡಿರುವ ಶಾಸಕ ಬಸನಗೌಡ ಪಾಟೀಲ್  ಮತ್ತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಸಮುದಾಯದ ಪದಾಧಿಕಾರಿಗಳು ತಹಸೀಲ್ದಾರ್  ಕಚೇರಿ ಮುಂದೆ ಸೋಮವಾರ ಪ್ರತಿಭಟಸಿ ಮನವಿ ಸಲ್ಲಿಸಿದರು.
ಪಟ್ಟಣದ ಸಮಾಜದ ಮುಖಂಡ ಶಿವಕುಮಾರ್ ಬೆಲ್ಲದ ಮಾತನಾಡಿ ಯತ್ನಾಳ್ ಮತ್ತು ಕಾಶಪ್ಪನವರ್  ವಿನಾಕಾರಣ ನಮ್ಮ ಸಮಾಜವನ್ನು ವ್ಯಂಗ್ಯ  ಮಾಡಿ ಮಾತನಾಡುವ ಮೂಲಕ ಇಡೀ ಬಣಜಿಗ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಬಣಜಿಗ ಸಮಾಜ ಯಾರ ವಿರುದ್ಧವೂ ಇಲ್ಲ ನಾವೆಲ್ಲ ಲಿಂಗಾಯಿತರು ನಾವೇ ಕಚ್ಚಾಡಿದರೆ ಬೇರೆ ಸಮಾಜದವರು ಏನೆಂದುಕೊಂಡರು. ಎಂಬ ಪರಿಜ್ಞಾನವಿಲ್ಲದೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಾಜ ಒಡೆಯುವಂಥ ಕೆಲಸ ಮಾಡುತ್ತಿದ್ದಾರೆ ಎಂದರು.
 ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಹಾಲ್ದಾಳ್ ವಿಜಯಕುಮಾರ್, ತಾಲೂಕ್ ಘಟಕದ ಗೌರವಾಧ್ಯಕ್ಷ ಸಿದ್ದ ಮಲ್ಲಪ್ಪ ಪಟ್ಟೆದ್, ಖಂಡರಾದ ವಾಲಿ ಶಟ್ರು ಮಲ್ಲಿಕಾರ್ಜುನ ಚಿನಿವಾರ ಕೊಟ್ರೇಶ್, ಕೋರಿ ಪ್ರಕಾಶ್ ಅಶೋಕ್ ಜಾಲಿ ವೀರೇಶ್ ಮಜ್ಜಿಗಿ, ಆರ್ ಬಿ ಚನ್ನಬಸಪ್ಪ ವಿಶ್ವ ಪತಿ ಇಕ್ಕೇರಿ ಕೊಟ್ರೇಶಿ ಮೋರಿಗೇರಿ  ಮಂಜುನಾಥ ಲಿಂಗದಳ್ಳಿ ಬಸವರಾಜ ಇತರರಿದ್ದರು.