
ಸಿರವಾರ,ಏ.ಂ೧- ೨೦೨೩ ರ ಚುನಾವಣೆಯು ಸೂಸುತ್ರವಾಗಿ ಜರುಗುವುವಂತೆ ಸರ್ಕಾರ ಅನೇಕ ಅನೂಕೂಲ ಮಾಡಿಕೊಟ್ಟಿದೆ, ಈ ಬಾರಿ ೮೦ ವರ್ಷ ಮೇಲ್ಪಟವರಿಗೆ ವಿಶೇಷ ಮತದಾನಕ್ಕೆ ಅವಕಾಶ ನೀಡಿದೆ. ಬಿಎಲ್‌ಓಗಳು ಅಂತವರ ಮನೆಗೆ ತೆರಳಿ ಪಾರಂ ನಂ ೧೨ ತುಂಬಿ ಕೊಡುವಂತೆ ಹೇಳಬೇಕು ಎಂದು ತಹಸೀಲ್ದಾರ ಸುರೇಶ ವರ್ಮ ಹೇಳಿದರು.
ಪಟ್ಟಣ ಪಂಚಾಯತಿಯಲ್ಲಿ ಇಂದು ಬಿಎಲ್‌ಓಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಹಿಂದೆ ಪ್ರತಿಯೊಬ್ಬರು ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಬೇಕಾಗಿತ್ತು. ಆದರೆ ಈ ಚುನಾವಣೆಯಲ್ಲಿ ೮೦ ವರ್ಷ ಮೇಲ್ಪಟ್ಟವರಿಗೆ ಅವರ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಿದೆ. ಅಂತವರಿಗೆ ಪಾರಂ ೧೨ ಡಿ ನೀಡಿ ಅವರೆ ತುಂಬುವಂತೆ ಹೇಳಿ, ಆದರೆ ಅದರಲ್ಲಿ ಕೇಲವರು ಓಡಾಡಿಕೊಂಡು ಶಕ್ತರಾಗಿರುತ್ತಾರೆ. ಅಂತವರು ಕೇಂದ್ರಕ್ಕೆ ಬರಬೇಕು, ೮೦ ವರ್ಷ ಮೆಲ್ಪಟ ಅಶಕ್ತರು, ರೋಗಿಗಳು, ಹಾಸಿಗೆ ಯಿಂದ ಏಳದೆ ಇರುವಂತವರಿಗೆ ಮಾತ್ರ ಮನೆಯಿಂದ ಮತದಾನಕ್ಕೆ ಅವಕಾಶ ಇದೆ.
ಅಂತವರ ಲಿಸ್ಟ್ ಮಾಡಿ, ವಯೋವೃದ್ದರ ಮನೆಗೆ ವಾಹನದಿಂದ ಕರೆತಂದು ಮತದಾನ ಮಾಡಿಸಿ ಮರಳಿ ಮನೆಗೆ ಬಿಡುವ ವ್ಯವಸ್ಥೆ ಮಾಡಲಾಗುವುದು. ೦೧-೦೪-೨೦೨೩ ಕ್ಕೆ ೧೮ ವರ್ಷ ತುಂಬುವ ಪ್ರತಿಯೊಬ್ಬರಿಗೂ ಚುನಾವಣೆ ಗುರುತಿನಿ ಚೀಟಿ ನೊಂದಣಿ ಮಾಡಿಸಿಕೊಂಡು ಮತ ಚಲಾವಣೆ ಮಾಡಬಹುದು. ಈಗಾಗಲೇ ನೀತಿ ಸಂಹಿತೆ ಜಾರಿಯಲಿದೆ. ಧಾರ್ಮಿಕ ಕೇಂದ್ರದಲ್ಲಿ ಪ್ರಚಾರ ಮಾಡುವಂತಿಲ್ಲ. ಈಗಾಗಲೇ ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಹಾಕಲಾಗಿದ ಬ್ಯಾನರ್, ಗೋಡೆ ಬರಹಗಳನ್ನು ತೆಗೆಯಲಾಗಿದೆ. ಇದರೆ ಗಮನಕ್ಕೆ ತನ್ನಿ ಎಂದರು.
ಸಂದರ್ಭದಲ್ಲಿ ಪ.ಪಂಚಾಯತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಕಂದಾಯ ನಿರಿಕ್ಷಕರಾದ ಶ್ರೀನಾಥ, ಗ್ರಾಮಲೆಕ್ಕಾದಿಕಾರಿ ವಿಲ್ಸನ್, ಬಿಎಲ್‌ಓ ಗಳು ಇದ್ದರು.