ಅವಳಿ ತಾಲೂಕಿನಲ್ಲಿ 52 ಜನರಿಗೆ ಕೊರೋನಾ

ಹೊನ್ನಾಳಿ.ಮೇ.೫ ; ಅವಳಿ ತಾಲೂಕಿನಲ್ಲಿ  ಬರೋಬರಿ 52 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.ಎರಡನೇ ಅಲೆಯಲ್ಲಿ ಇದು ದೊಡ್ಡ ಸಂಖ್ಯೆಯಾಗಿದೆ. ಹೊನ್ನಾಳಿ ನಗರದಲ್ಲಿ 12 ಹಾಗೂ ಗ್ರಾಮೀಣ ಪ್ರದೇಶದಲ್ಲಿ 15 ಹಾಗೂ ನ್ಯಾಮತಿ ತಾಲೂಕಿನಲ್ಲಿ 25 ಪ್ರಕರಣಗಳು ಸೇರಿ ಒಟ್ಟು ಅವಳಿ ತಾಲೂಕಿನಲ್ಲಿ 52 ಪ್ರಕರಣಗಳು ಪತ್ತೆಯಾಗಿವೆ.ಮೂರು ಸಾವು ; ಅವಳಿ ತಾಲೂಕಿನಲ್ಲಿ ಕರೋನಾದಿಂದ ಮೂರು ಜನರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ನ್ಯಾಮತಿ ತಾಲೂಕಿನ ಚಿಕ್ಕೇರಹಳ್ಳಿ,ಬಾಗವಾಡಿ ಹಾಗೂ ನ್ಯಾಮತಿ ಪಟ್ಟಣದಲ್ಲಿ ಒಂದು ಸಾವು ಘಟಿಸಿದೆ.ಕಟ್ಟುನಿಟ್ಟಿನ ಕ್ರಮ ; ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಎಲ್ಲಾ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲೂ ವಾಃನಗಳು ರಸ್ತೆಗಿಳಿಯದಂತೆ ವ್ಯಾಪಕವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಪಿಐ ದೇವರಾಜ್ ತಿಳಿಸಿದರು.ಅವಳಿ ತಾಲೂಕಿನಲ್ಲಿ ಮಾಸ್ಕ್ ಇಲ್ಲದೆ ಓಡಾಡುತ್ತಿದ್ದ 91 ಜನರಿಗೆ ದಂಡ ವಿಧಿಸಿ 9100 ರೂಗಳನ್ನು ವಸೂಲಿ ಮಾಡಲಾಗಿದೆ. ಕೆಇಡಿ ಆಕ್ಟ್ ಪ್ರಕಾರ ಸಮಯ ಮೀರಿಯೂ ಅಂಗಡಿಗಳನ್ನು ತೆಗೆದಿದ್ದ 6 ಅಂಗಡಿ ಮಾಲಿಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.ಹೊನ್ನಾಳಿ ಹಾಗೂ ನ್ಯಾಮತಿ ಪಟ್ಟಣಗಳಲ್ಲಿ 10 ಗಂಟೆ ನಂತರ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶ ನೀಡುತಿಲ್ಲ,ದಿನಸಿ ಅಂಗಡಿಗಳಿಗೆ 12 ರವರೆಗೆ ಸಮಯ ನೀಡಿರುವುದರಿಂದ ಅಂತಹ ವಾಹನಗಳಿಗೆ ಮಾತ್ರ ಅವಕಾಶ ನೀಡಿದ್ದು ಬೇರೆ ಯಾವುದೇ ವಾಃನಗಳು ಅನಾವಶ್ಯಕವಾಗಿ ವಾಹನಗಳು ಓಡಾಡಿದರೆ ಅಂತಹ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದು ಸಿಪಿಐ ದೇವರಾಜ್ ತಿಳಿಸಿದರು.ಬ್ಯಾಂಕುಗಳು ಮುಂದೆ ಸಾಲು ಸಾಲು ; ಹೊನ್ನಾಳಿ ನಗರದ ಕರ್ನಾಟಕ ಬ್ಯಾಂಕ್, ಹಾಗೂ ಕೆನಾರ ಬ್ಯಾಂಕಿನ ಮುಂದೆ ಯಾವುದೇ ಸಾಮಾಜಿಕ ಅಂತರ ಇಲ್ಲದೆ ಗ್ರಹಕರು ಸರದಿಯಲ್ಲಿ ನಿಂತಿದ್ದಾರೆ,ಅವರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ನಿಂತುಕೊಳ್ಳಿ ಎಂದು ತಿಳಿ ಹೇಳುವ ಕೆಲಸವನ್ನು ಬ್ಯಾಂಕಿನ ಸಿಬ್ಬಂಧಿಗಳು ಮಾಡಲಿಲ್ಲ.