ಅವಳಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಮೊದಲ ಆದ್ಯತೆ

ಜಗಳೂರು.ಸೆ.೧೪; ದಾವಣಗೆರೆ – ಚಿತ್ರದುರ್ಗ ಅವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನ ತಳ ಮಟ್ಟದಿಂದ ಸಂಘಟಿಸಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು  ಕೆಪಿಸಿಸಿ‌ ಕ್ಷೇತ್ರ ಉಸ್ತುವಾರಿ  ಅಮೃತೇಶ್ ಸ್ವಾಮಿ ಹೇಳಿದರು  ,ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನ ಸಭಾ‌ಕ್ಷೇತ್ರದ ಪಕ್ಷ ಬಲವರ್ಧನೆ ಸಭೆಯಲ್ಲಿ ಮಾತನಾಡಿದರು ಚುನಾವಣಾ ಯಾವ ಸಮಯದಲ್ಲಿ ಆದರೂ ಬರಬಹುದು ಕಾಂಗ್ರೆಸ್ ಕಾರ್ಯಕರ್ತರು ಈಗಿನಿಂದಲೇ ಬೂತ್ ಮಟ್ಟ ಹಾಗು ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ ಕೇಂದ್ರ ಹಾಗು ರಾಜ್ಯ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಬಗ್ಗೆ ತಿಳಿಸಿ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನ ತಿಳಿಸಬೇಕು ಎಂದು ಸೂಚಿಸಿದರು ಕಾಂಗ್ರೆಸ್ ಸದಸ್ಯತ್ವ ಡಿಜಿಟಲ್ ನೊಂದೋಣಿಯಲ್ಲಿ ನಾನು ಸಾಮಾನ್ಯ ಕಾರ್ಯಕರ್ತನಾದರೂ ಸಹ 25 ಸಾವಿರ ಸದಸ್ಯತ್ವ ಮಾಡಿಸಿದ್ದೇನೆ ಇಂತಹ ಆಸಕ್ತಿ ಯುವಕರನ್ನ ಆಯ್ಕೆ ಮಾಡಿಕೊಂಡು ಪ್ರತಿ ವಾರ್ಡ್ ಹಾಗು ಗ್ರಾಮ ಮಟ್ಟದಲ್ಲಿ ಒಬ್ಬರಂತೆ ಉಸ್ತುವಾರಿ ಗಳನ್ನ ನೇಮಿಸಿಕೊಂಡು ಸಂಘಟನೆ ಮಾಡಿ ಎಂದರು .ಜಿಲ್ಲಾ ಕಾಂಗ್ರೆಸ್ ವೀಕ್ಷಕರು ವಿಜಯ್ ಕುಮಾರ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ತಳಹದಿಯ ಮೇಲೆ ಕೇಡೆರ್ ಬೇಸ್ ಪಕ್ಷವನ್ನ ಸಂಘಟಿಸುವ ಮೂಲಕ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕಿದೆ  ಹಿಂಧೂ ಮುಸ್ಲಿಂ ಎಂಬ ಕೋಮುಭಾವನೆ ಹರಡಿಸಿ ಯುವಕರನ್ನ ದಾರಿ ತಪ್ಪಿಸಿ   ಇಡೀ ದೇಶ ಕೆಲ ವ್ಯಕ್ತಿಗಳ ಕೈನಲ್ಲಿ ಇರುವುದನ್ನ ತಪ್ಪಿಸಿ ಜ್ಯಾತ್ಯಾತೀಯ ತತ್ವದ ತಳಹದಿಯ ಮೇಲೆ ಸರ್ಕಾರ ರಚಿಸಬೇಕಿದೆ  ಎಂದರು , ಇಂದು ಮುಸ್ಲಿಂ ಸಮುದಾಯವನ್ನ ಟಾರ್ಗೇಟ್ ಮಾಡಿದ್ದಾರೆ ನಾವು ಹೀಗೆ ಕೂತರೆ ಮುಂದೆ ಅವರ ಗುರಿ ಎಸ್ಸಿ , ಎಸ್ಟಿ ಓಬಿಸಿ ಗಳಾಗಿದೆ ಇಂತಹ ಕುತಂತ್ರವನ್ನ ತಿಳಿಸಿ ಕ್ಷಣಿಕ ಸುಖಕ್ಕಾಗಿ ಬಿಜೆಪಿಗೆ ಹೋಗಿರುವ ನಮ್ಮವರನ್ನ ವಾಪಾಸು ಕರೆತರುವ ಕೆಲಸ ಮಾಡಿ ಎಂದು ತಿಳಿಸಿದರು.ಜಿಲ್ಲಾದ್ಯಕ್ಷ ಹೆಚ್.ಬಿ.ಮಂಜಪ್ಪ ಮಾತನಾಡಿ  ಕ್ಷೇತ್ರದಲ್ಲಿ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಅವರು ಮಾಡಿದ ರಸ್ತೆಗಳಿಗೆ ಕನಿಷ್ಠ ಗುಂಡಿ ಮುಚ್ಚುವ ಕೆಸಲ ಈಗಿನ ಶಾಸಕರ ಕೈಲಾಗಿಲ್ಲ ಇನ್ನುನೇ ನಿರೀಕ್ಷಿಸಲು ಸಾಧ್ಯ ಎಂದು ವ್ಯಂಗ್ಯ ಮಾಡಿದರು,ದೇಶದ ಏಕತೆ ಸಮಾನತೆ ಸ್ವಾತಂತ್ರ್ಯ ಕ್ಕಾಗಿ ಶ್ರಮಿಸಯತ್ತಿರುವ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಬೇಕು , ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಯಾರು ಕೂಡ ಸತ್ಯ ಹೇಳದಂತ ಸ್ಥಿತಿ ನಿರ್ಮಾಣವಾಗಿದೆ ಒಂದೇ ಪಕ್ಷ ಒಂದೇ ಕಾನುನು ತರುವ ಹುನ್ನಾರ ನೆಡೆಯುತ್ತಿದೆ ಇಂತಹ ವಿಚಾರದಾರೆಗಳನ್ನ ತಿಳಿದುಕೊಂಡು ಜನ ಸಾಮಾನ್ಯರ ಹಿತ ಕಾಯುವಂತ ಕೆಲಸ ಮಾಡುವ ಮೂಲಕ ಅವರ ನೆರವಿಗೆ ಬಂದು ಮುಂಬರುವ ದಿನಗಳಲ್ಲಿ ಜಗಳೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲದಂತೆ ತಡೆದು ಇಲ್ಲಿನ ಜನ ವಿರೋಧಿ ಶಾಸಕರಿಗೆ ತಕ್ಕ ಪಾಠ ಕಲಿಸಿ ಮನೆಗೆ ಕಳುಹಿಸಿ ಎಂದು ಕರೆ ನೀಡಿದರು .