ಅವಳಿ ಜಿಲ್ಲೆಗಳಲ್ಲಿ ಕೊರೋನಾ ಇಳಿಮುಖ

ಅನಂತ ಜೋಶಿ
ಹೊಸಪೇಟೆ ಜೂ6: ಒಂದು ಹಂತದಲ್ಲಿ ಸೋಂಕು ಏರಿಕೆಯ ಪ್ರಮಾಣ ರಾಜ್ಯದಲ್ಲಿಯೇ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿರುತ್ತಿದ್ದ ಅವಿಭಾಜಿತ ಬಳ್ಳಾರಿ ಜಿಲ್ಲೆ ಇದೀಗ ಅತ್ಯಂತ ಕಡಿಮೆ ಏರಿಕೆಯ ಜಿಲ್ಲೆಯಲ್ಲಿ ಆಸ್ಥಾನವನ್ನು ತುಂಬಲಾರಂಭಿಸಿದ್ದು ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಕರೋನಾ ಮಹಾಮಾರಿ ಪರಿಣಾಮ ಎಷ್ಟೀತ್ತೆಂದರೆ ಕರೋನಾ ವಾರಿಯರ್ಸ್‍ಗಳಿಗೂ ಬೆಡ್ ಸಿಗದ ಪರಿಸ್ಥಿತಿಯನ್ನು ಎದುರು ನೋಡುವಂತೆ ಮಾಡಿತು. ಅನೇಕರು ಬೆಡ್ ಹುಡುಕಾಟದಲ್ಲಿಯೆ ಕಾಲ ಕಳೆಯುವಂತೆ ಮಾಡಿತು. ಅಕ್ಕಪಕ್ಕದ ಜಿಲ್ಲೆಯಲ್ಲಿ ಚಿಕಿತ್ಸೆಗೆ ದಾಖಲಾದ ಉದಾಹರಣೆಗಳು ಮಾದ್ಯಮದಲ್ಲಿಯೇ ಪ್ರಕಟವಾಗಿದ್ದವು.
ಈ ಮಧ್ಯ ಜಿಂದಾಲ್ ಸಂಸ್ಥೆಯೂ ಸಹ 1ಸಾವಿರ ಬೆಡ್‍ಗಳ ಆದುನಿಕ ಸೌಲಭ್ಯಗಳನ್ನು ಹೊಂದಿದ ತಾತ್ಕಾಲಿಕ ಆಸ್ಪತ್ರೆ ಮಾಡಿದ ಮೇಲೆ ಸ್ವಲ್ಪ ನೆಮ್ಮದಿಯನ್ನು ಕಾಣುವಂತಾಗಿದ್ದರೂ ಸರ್ಕಾರ ಲಾಕ್‍ಡೌನ್ ಮತ್ತಷ್ಟು ಕಠಿಣ ಮಾಡಿದ್ದೆ ತಡಾ ಬಳ್ಳಾರಿ ವಿಜಯನಗರ ಜಿಲ್ಲೆಗಳಲ್ಲಿಯೂ ಜಿಲ್ಲಾಡಳಿತ ಅಗತ್ಯವಸ್ತು ಖರೀದಿ, ಬ್ಯಾಂಕ್ ವ್ಯವಹಾರಕ್ಕೂ ನಿರ್ಭಂದಿಸುವ ಮೂಲಕ ಮತ್ತಷ್ಟು ಕಡೆಮೆಯಾಗಲು ಸಹಕಾರಿಯಾಯಿತು
ನಿತ್ಯವೂ 2ಸಾವಿರ ಗಡಿಯತ್ತ ಬರುತ್ತಿದ್ದ ಪಾಜಿಟೀವ್ ಪ್ರಕರಣಗಳು ಸದ್ಯ 5 ನೂರರ ಗಡಿದಾಟದಂತೆ ದಾಖಲಾಗುವ ಮೂಲಕ ಕಠಿಣ ನಿರ್ಭಂಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ ಎನ್ನಲಾಗುತ್ತಿದೆ.
ಅಭಿನಂದನಾರ್ಹ ಕಾರ್ಯದಲ್ಲಿ ಪೊಲೀಸರು
ಬಳ್ಳಾರಿ, ವಿಜಯನಗರ ಅವಳಿ ಜಿಲ್ಲೆಯ ಪೊಲೀಸರು ಅತ್ಯಂತ ಪರಿಣಾಮ ಕಾರಿಯಾಗಿಕಾರ್ಯನಿರ್ವಹಿಸುವ ಮೂಲಕ ಸೋಂಕು ಕಡಿವಾಣದಲ್ಲಿ ನಿಜವಾಗಿಯೂ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಿದ್ದಾರೆ ಎನ್ನಬಹುದು ಉಭಯ ಜಿಲ್ಲೆಯ ಬಹುತೇಕ ಉಪವಿಭಾಗದ ಪೊಲೀಸ ಅಧಿಕಾರಿಗಳು ಬೆಳಿಗ್ಗೆ ವಾಯು ವಿಹಾರದಿಂದ ಹಿಡಿದ ರಾತ್ರಿ ಮಲಗುವ ವರೆಗೂ ಜಿಲ್ಲಾಗಡಿಗಳಲ್ಲಿ ಹಾಕಿದ ಚೆಕ್‍ಪೋಸ್ಟ್‍ಗಳ ಜೊತೆ ತಮ್ಮ ವ್ಯಾಪ್ತಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸುವ ಮೂಲಕ ಒಂದು ಹಂತದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಅನಿಸಿದರೂ ಪರವಾಗಿಲ್ಲ ಎಂಬಂತೆ ಕಠಿಣ ಕ್ರಮ ಕೈಗೊಂಡ ಪರಿಣಾಮ ಬಹುತೇಕರು ಮನೆಯಲ್ಲಿಯೆ ಲಾಕ್ ಆಗುವಂತೆ ಮಾಡಿತು.
ಕೆಲ ಘಟನೆಗಳಲ್ಲಂತು ಪೊಲೀರು ಕೈಮುಗಿದು, ಲಾಠಿ ಬೀಸಿ, ವಾಹನ ಹಾಗೂ ಜನರನ್ನು ಠಾಣೆಗೆ ಕರ ತಂದು ದಂಡಿಸುವ ಕೆಲಸ ಮಾಡುವ ಮೂಲಕ ಕಟ್ಟುನಿಟ್ಟಿನ ಲಾಕ್‍ಡೌನ್ ಅನುಷ್ಠಾನ ಈ ಹಿಂತಕ್ಕೆ ಬಂದು ತಲುಪಲು ಕಾರಣವಾಗಿದೆ.
ಅವಳಿ ಜಿಲ್ಲೆಯಲ್ಲಿ ಸೋಂಕಿನ ಅಂಕಿ ಅಂಶ:
ಜೂನ್ 5ಕ್ಕೆ ಅಂತ್ಯವಾದಂತೆ ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 6046 ಇದು ಶನಿವಾರದ ದಿನ ಅಂತ್ಯಕ್ಕೆ 345 ಪ್ರಕರಣಗಳು ಪತ್ತೆಯಾಗಿವೆ ಮತ್ತು 768 ಪ್ರಕರಣಗಳು ಕರೋನಾ ಮುಕ್ತ ಎಂದು ಬಿಡುಗಡೆಯಾಗಿವೆ.
ಅವಳಿ ಜಿಲ್ಲೆಯಲ್ಲಿ ಈ ವರೆಗೂ 93659 ಪ್ರಕರಣಗಳು ವರದಿಯಾಗಿದ್ದು 86209 ಪ್ರಕರಣಗಳು ಬಿಡುಗಡೆಯಾಗಿದ್ದ ಸದ್ಯ ಜಿಲ್ಲೆಯಲ್ಲಿ 6046 ಪ್ರಕರಣಗಳ ಸಕ್ರೀಯವಾಗಿವೆ. ಈ ವರೆಗೂ 1404 ಸಾವು ಸಂಭವಿಸಿದ್ದು ಬಹುತೇಕ ಅವಳಿ ಜಿಲ್ಲೆಯ ಹೊಸಪೇಟೆ ಹಾಗೂ ಬಳ್ಳಾರಿ ಸೇರಿದಂತೆ ಎಲ್ಲ ತಾಲುಕುಗಳಲ್ಲಿ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ಆಗಂತ ಟೆಸ್ಟೀಂಗ್ ಪ್ರಮಾಣ ಕಡಿಮೆಯಾಗದಿರುವುದು ಮತ್ತೊಂದು ನೆಮ್ಮದಿಗೆ ಕಾರಣವಾಗಿದೆ. ಒಟ್ಟಾರೆ ಸೋಂಕು ಕಡಿವಾಣವಾಗುತ್ತಿರುವುದು ಜಿಲ್ಲೆ ಜನತೆ ನೆಮ್ಮದಿಗೆ ಕಾರಣವಾಗುತ್ತಿದೆ.