ಅವಲಕ್ಕಿ ಗರಿಗರಿ ಪಕೋಡ

ಬೇಕಾಗುವ ಪದಾರ್ಥಗಳು:
ಮಿಕ್ಸಿಯಲ್ಲಿ ಪುಡಿ ಮಾಡಿದ ಅವಲಕ್ಕಿ – ೧ ಲೋಟ
ಕಡ್ಲೆಹಿಟ್ಟು – ಅರ್ಧ ಲೋಟ
ಈರುಳ್ಳಿ ಹೆಚ್ಚಿದ್ದು – ೨
ತುರಿದ ಆಲೂಗೆಡ್ಡೆ – ೧
ಕರಿಬೇವು ಹೆಚ್ಚಿದ್ದು – ರುಚಿಗೆ ತಕ್ಕಷ್ಟು
ಕೊತ್ತಂಬರಿಸೊಪ್ಪು ಹೆಚ್ಚಿದ್ದು – ರುಚಿಗೆ ತಕ್ಕಷ್ಟು
ಹಸಿಮೆಣಸಿನಕಾಯಿ ಪೇಸ್ಟ್ – ರುಚಿಗೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಕಾದಎಣ್ಣೆ – ೨ ಚಮಚ

ವಿಧಾನ:
ಈ ಎಲ್ಲಾ ಪದಾರ್ಥಗಳನ್ನು ಸೇರಿಸಿ, ಕಲೆಸಿ ಹಿಡಿಸುವಷ್ಟು ನೀರುಹಾಕಿ ಉಂಡೆಮಾಡಿ ಕಾದಎಣ್ಣೆಯಲ್ಲಿ ಕರಿಯಬೇಕು.