ಅವಲಕ್ಕಿ ಕಟ್ಲೆಟ್ (ವಡೆ)

ಬೇಕಾಗುವ ಪದಾರ್ಥಗಳು:
ತೆಳುಅವಲಕ್ಕಿ – ೧ ಲೋಟ
ಉಪ್ಪು – ರುಚಿಗೆ ತಕ್ಕಷ್ಟು
ಹೆಚ್ಚಿದ ಹಸಿಮೆಣಸಿನಕಾಯಿ – ರುಚಿಗೆ ತಕ್ಕಷ್ಟು
ಕೊತ್ತಂಬರಿಸೊಪ್ಪು, ಕರಿಬೇವು – ರುಚಿಗೆ ತಕ್ಕಷ್ಟು
ತುರಿದ ಆಲೂಗೆಡ್ಡೆ – ೨
ನಿಂಬೆರಸ – ಅರ್ಧ ಹೋಳು
ಮೈದಾಹಿಟ್ಟು/ಕಡ್ಲೆಹಿಟ್ಟು – ಸ್ವಲ್ಪ
ಹೆಚ್ಚಿದ ಈರುಳ್ಳಿ – ರುಚಿಗೆ ತಕ್ಕಷ್ಟು
ಪುದೀನಾಎಲೆ/ಸಬ್ಬಸ್ಸಿಗೆಸೊಪ್ಪು – ರುಚಿಗೆ ತಕ್ಕಷ್ಟು
ತುರಿದ ಶುಂಠಿ – ರುಚಿಗೆ ತಕ್ಕಷ್ಟು
ಅರಿಶಿನ – ರುಚಿಗೆ ತಕ್ಕಷ್ಟು
ವಿಧಾನ: ತೆಳುಅವಲಕ್ಕಿಯನ್ನು ನೀರಿನಲ್ಲಿ ತೊಳೆದು ತಕ್ಷಣ ತೆಗೆದು ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ನೀರು ಬೆರಸದೆ ಕಲೆಸಿ, ಉಂಡೆಮಾಡಿ ವಡೆ ಆಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಕರಿಯಬೇಕು.
(ಪುದೀನಾ ಎಲೆ ಅಥವಾ ಸಬ್ಬಸ್ಸಿಗೆಸೊಪ್ಪು ಎರಡನ್ನೂ ಹಾಕಬಹುದು. ಮೈದಾಹಿಟ್ಟು ಹಾಗೂ ಕಡ್ಲೆಹಿಟ್ಟು ಎರಡರಲ್ಲಿ ಒಂದನ್ನು ಬಳಸಬಹುದು. ತೆಳುಅವಲಕ್ಕಿ ಬದಲು ದಪ್ಪಅವಲಕ್ಕಿಯನ್ನು ಬಳಸಬಹುದು. ಆದರೆ ನೀರಿನಲ್ಲಿ ನೆಂದಿರಬೇಕು ಅಥವಾ ತೊಳೆದು ಇಡಬೇಕು. ನೆಂದ ಮೇಲೆ ಇತರೆ ಪದಾರ್ಥಗಳನ್ನು ಹಾಕಿ ಕಲೆಸಬೇಕು.)