ಅವಲಕ್ಕಿ ಉಪ್ಪೇರಿ

ಬೇಕಾಗುವ ಪದಾರ್ಥಗಳು:

 • ಹಸಿಕಾಯಿತುರಿ – ೧ ಲೋಟ
 • ಬ್ಯಾಡಗಿಮೆಣಸಿನಕಾಯಿ – ೪ – ೬
 • ಜೀರಿಗೆ – ೧ ಚಮಚ
 • ಕೊತ್ತಂಬರಿಬೀಜ – ೨ ಚಮಚ
 • ಅರಿಶಿನ – ಅರ್ಧ ಚಮಚ
  ಮೇಲಿನ ಪದಾರ್ಥಗಳನ್ನು ಸೇರಿಸಿ ರುಬ್ಬಿಕೊಳ್ಳಿ.
 • ದಪ್ಪಅವಲಕ್ಕಿ – ೧ ಲೋಟ
 • ಉಪ್ಪು, ಖಾರಸೇವ್, ಈರುಳ್ಳಿ ಚಿಕ್ಕದಾಗಿ ಹೆಚ್ಚಿದ್ದು, ನಿಂಬೆರಸ, ಕೊಬ್ಬರಿಎಣ್ಣೆ, ಸಕ್ಕರೆ, ಕೊತ್ತಂಬರಿಸೊಪ್ಪು – ರುಚಿಗೆ ತಕ್ಕಷ್ಟು
  ವಿಧಾನ:
  ರುಬ್ಬಲಿಕ್ಕೆ ಕೊಟ್ಟ ಪದಾರ್ಥಗಳನ್ನು ಸೇರಿಸಿ ಹಸಿಯಾಗಿಯೇ ತರಿತರಿಯಾಗಿ ಒಣಪುಡಿ ಮಾಡಬೇಕು. ನೀರಿನಲ್ಲಿ ನೆನೆಸಿ ಹಿಂಡಿ ತೆಗೆದ ದಪ್ಪಅವಲಕ್ಕಿಗೆ ರುಬ್ಬಿದ ಒಣಮಸಾಲೆಪುಡಿ ಮತ್ತು ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲೆಸಬೇಕು.