ಅವರಿವರತ್ತಗಿರಕಿ ಹೊಡೆಯುತ್ತಿರುವ ಬಳ್ಳಾರಿ ನಗರ ಕ್ಷೇತ್ರದ  ಕಾಂಗ್ರೆಸ್ ಟಿಕೆಟ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.13: ನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕಗ್ಗಂಟು ಬಗೆಹರಿಯುತ್ತಿಲ್ಲ. ಇನ್ನೂ ಅವರ ಬಿಟ್ಟು, ಇವರು ಎನ್ನುತ್ತಲೇ ನಡೆದಿದೆ ಎನ್ನಲಾಗುತ್ತಿದೆ.
ಈಗ ದೆಹಲಿಯಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಹೊಸ ಬೆಳವಣಿಗೆ ನಡೆಯುತ್ತಿದೆ ಎನ್ನಲಾಗಿದೆ. ಸೈಲೆಂಟ್ ಆಗಿ ಇರುವವರಿಗೆ ಟಿಕೆಟ್ ಬರುತ್ತೆ ಎಂಬ ಗುಸು ಗುಸು ಸುದ್ದಿ ಹೊಸ ಬೆಳವಣಿಗೆಯಾಗಿದೆಯಂತೆ.
ಹಲವಾರು ಕಗ್ಗಂಟುಗಳು ಬಗೆಹರಿದು ಇನ್ನೇನು ಯುವ ಮುಖಂಡ ನಾರಾ ಭರತ್ ರೆಡ್ಡಿ ಅವರಿಗೆ ಟಿಕೆಟ್ ಪೈನಲ್ ಎಂದು ಹೇಳಿದಾಗಲೆಲ್ಲ ಹೊಸ ಹೊಸ ಕಗ್ಗಂಟು ಹುಟ್ಟಿಕೊಳ್ಳುತ್ತಿವೆ.
ಮೊನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದ ಆಂಜನೇಯಲು ಅವರೊಂದಿಗೆ ಸಂಧಾನ ನಡೆಸಿ ಭರತ್ ಗೆ ಸಹಕಾರ ಮಾಡಿ ಎಂದು ಹೇಳಿದ್ದಾರೆ. ಭರತ್ ಅವರ ಟಿಕೆಟ್ ಹಾದಿ ಸುಗಮವಾಯ್ತು ಎಂಬಂತಾಗಿತ್ತು.
ಆದರೆ ನಿನ್ನೆ ದೆಹಲಿಯಲ್ಲಿನ ಬೆಳವಣಿಗೆ ಎಐಸಿಸಿಯಲ್ಲಿನ ಉನ್ನತ ನಾಯಕರು ಬಳ್ಳಾರಿ ಟಿಕೆಟ್ ಬಗ್ಗೆ ಗಂಭೀರ ಚರ್ಚೆ ನಡೆಸಿ. ನೀವೆಲ್ಲ ಸೈಲಂಟಾಗಿರಿ ನಾವು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿರುವುದು ಬಿಜೆಪಿಗೆ ಹಣದಿಂದಷ್ಟೇ ಅಲ್ಲ ಸಮುದಾಯದ ಮುಖಾಂತರವೂ ಠಕ್ಕರ್ ನೀಡಬೇಕಿದೆ ಎಂಬ ಮಾತು ಕೇಳಿ ಬಂದಿದೆಯಂತೆ.
ಮಾಜಿ ಶಾಸಕ ಅನಿಲ್ ಲಾಡ್ ಸೋನಿಯಾ ಅವರನ್ನು ಬೆನ್ನು ಬಿಡದಂತೆ ಟಿಕೆಟ್ ಗಾಗಿ ಕಾಡುತ್ತಿದ್ದಾರಂತೆ. 
ಹಣ ಇಲ್ಲ ಎಂದು ಅಲ್ಲಂ ಮನೆತನದವರು ದೂರ ಸರಿದಿದ್ದಾರೆಂಬ ಮಾತು ಸಹ ಸುಳ್ಳಂತೆ. ಅಂತೂ ಕಾಂಗ್ರೆಸ್ ಟಿಕೆಟ್ ನೀಡಲು ಇಷ್ಟೊಂದು ವಿಳಂಬದ ಬಗ್ಗೆ ಮಾತ್ರ ನಗರದ ಮತದಾರರು ಬೇಸರಗೊಂಡಿದ್ದು. ಯಾರಿಗೆ ಟಿಕೆಟ್ ಎಂದು ಕಾತುರದಿಂದ ಕಾಯುತ್ತಿದ್ದಾರೆ.