ಅವರಾದ್ (ಬಿ) ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕಲಬುರಗಿ,ಜೂ.6: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್ ಸಿ ಎಸ್ ಟಿ) ಪ್ರಾದೇಶಿಕ ಕೇಂದ್ರ ಹಾಗೂ ಕರ್ನಾಟಕಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಕೆ.ಪಿ.ಎಸ್ ಅವರಾದ್ (ಬಿ) ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ವಿದ್ಯಾರ್ಥಿಗಳಿಗಾಗಿ ಪರಿಸರ ಸಂರಕ್ಷಣೆಯಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು. ಪರಿಸರ ದಿನಾಚರಣೆ ಅಂಗವಾಗಿ ಸಾಂಕೇತಿಕವಾಗಿ ಶಾಲಾ
ಆವರಣದಲ್ಲಿ 10 ಸಸಿಗಳನ್ನು ನೇಡಲಾಯಿತು ಹಾಗೂ ಬೀಜದುಂಡೆಗಳನ್ನು ತಯಾರಿಸಿ ಪಸರಿಸುವ ಕುರಿತು ಕಾರ್ಯಗಾರಹಮ್ಮಿಕೊಳ್ಳಲಾಯಿತು ಪರಿಸರ ಪ್ರಜ್ಞೆ ಬಗ್ಗೆ ಕಾಳಗಿಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ ಉಪನ್ಯಾಸಕ ಡಾ. ಪ್ರಭುದೇವ್ ಎಂ ಎಸ್ ಅವರು ಸಸಿಗಳನ್ನು,ಮರಗಳನ್ನು ಸಂರಕ್ಷಿಸುವ ಕುರಿತು, ಮರದ ಮೌಲ್ಯ, ಸಂಪನ್ಮೂಲಗಳ ಸದ್ಬಳಕೆನಿರ್ವಹಣೆ, ಹಸಿರು ಜೀವನ ಶೈಲಿಅಳವಡಿಸಿಕೊಳ್ಳುವ ಬಗ್ಗೆ, ಚಿಕ್ಕಪುಟ್ಟ ಕೆಲಸಗಳಿಂದ ಮತ್ತು ಬದಲಾವಣೆಗಳಿಂದ ನಾವು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಹೇಗೆಬದಲಾಯಿಸಬೇಕು ಎಂಬ ಬಗ್ಗೆ ವಿವರವಾಗಿ ಉಪನ್ಯಾಸ ನೀಡಿದರು. ಕೆ.ಎಸ್ ಸಿ.ಎಸ್ .ಟಿಯೋಜನಾ ಅಭಿಯಂತರ ಡಾ. ಸೈಯದ್ ಸಮೀರ್ ಮಾತನಾಡಿದರು.ಪ್ರಾಂಶುಪಾಲರಾದ ಪರಮೇಶ್ವರ ಧನ್ನಿ ಹಾಜರಿದ್ದರು ಹಾಗೂ ಪ್ರಭಾರಿ ಮು.ಗು ಗೀತಾ ಡಿ ಪಾಟೀಲ ಅಧ್ಯಕ್ಷತೆ
ವಹಿಸಿದರು. ಶಿಕ್ಷಕ ದಾದಾಸಾಬ ಸ್ವಾಗತಿಸಿದರು ರುದ್ರಪ್ಪ ಶಿಕ್ಷಕರು ವಂದಿಸಿದರು ಹಿರಿಯ ಶಿಕ್ಷಕಿ ವಿಜಯಲಕ್ಷ್ಮಿ ರೆಡ್ಡಿ , ರಾಜೇಶ್ರೀ ತಪ್ಪಲಿ,ಅಕ್ಕಮಹಾದೇವಿ, ಮಧುಮತಿ, ಪ್ರದೀಪ ಕುಮಾರ, ಭೋಜನಗೌಡ, ದೈಹಿಕ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.