ಅವರವರ ಬಾವ, ಭಕ್ತಿಗೆ ತಕ್ಕಂತೆ ಭಗವಂತನ ಸ್ಮರಣೆ ಮಾಡಬೇಕು

ಕೆ.ಆರ್.ಪೇಟೆ. ಜು.14:- ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಜರು ತಮ್ಮ ಗ್ರಾಮಗಳಲ್ಲಿ ದೇವಾಲಯಗಳನ್ನು ಸ್ಥಾಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿ ಮಾನಸಿಕ ನೆಮ್ಮದಿ ಪಡೆಯುವ ಜೊತೆಗೆ ದೇವರಲ್ಲಿ ಶ್ರದ್ದೆ, ಭಕ್ತಿ, ನಿಷ್ಠೆ ಮುಂತಾದುವುಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ ಎಂದು ಮನ್ಮುಲ್ ನಿರ್ದೇಶಕ ಹೆಚ್.ಟಿ.ಮಂಜು ತಿಳಿಸಿದರು.
ಅವರು ಪಟ್ಟಣದ ತಮ್ಮ ನಿವಾಸದಲ್ಲಿ ತಾಲ್ಲೂಕಿನ ಬೂಕನಕೆರೆ ಹೋಬಳಿಯ ನಾರ್ಗೋನಹಳ್ಳಿ ಗ್ರಾಂದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗ್ರಾಮದ ಶಕ್ತಿದೇವತೆ ಮಾರಮ್ಮದೇವಿಯ ದೇವಸ್ಥಾನದ ಕಟ್ಟಡ ಕಾಮಗಾರಿಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿ ಮಾತನಾಡಿದರು.
ಮಾನವಯಾವ ಕ್ಷೇತ್ರದಲ್ಲಿ ಎಷ್ಟೇ ಸಾಧನೆ ಮಾಡಿದರೂ ಅವನು ಒಂದಲ್ಲಾ ಒಂದು ಸಂದರ್ಭದಲ್ಲಿ ದೇವರನ್ನು ನೆನೆಯಲೇಬೇಕಾಗುತ್ತದೆ. ಮನುಷ್ಯನು ತಾನು ಮಾಡುವ ಪ್ರತೀ ಕೆಲಸದ ಹಿಂದೆ ದೇವರ ಆಶೀರ್ವಾದ ಪಡೆಯುವುದನ್ನು ಕಾಣುತ್ತೇವೆ. ದಯಾಮಯಿಯಾದ ಭಗವಂತ ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳಿಗೂ ದಾರಿ ತೋರಿಸುತ್ತಿದ್ದು ಅವರವರ ಬಾವಕ್ಕೆ, ಭಕ್ತಿಗೆ ತಕ್ಕಂತೆ ಭಗವಂತನ್ನು ಸ್ಮರಣೆ ಮಾಡಬೇಕು. ಈ ನಿಟ್ಟಿನಲ್ಲಿ ನಾರ್ಗೋನಹಳ್ಳಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಶಕ್ತಿದೇವತೆ ಮಾರಮ್ಮದೇವಿಯ ದೇವಸ್ಥಾನ ಯಾವುದೇ ವಿಘ್ನವಿಲ್ಲದೇ ಸರಾಗವಾಗಿ ನಡೆಯಲಿ ಎಂದು ಆಶಿಸಿದರು.
ಇದೇವೇಳೆ ಮಾರಮ್ಮ ದೇವಸ್ಥಾನ ಸಮಿತಿಯ ಅಧ್ಯಕ್ಷ ಅಣ್ಣೇಗೌಡ, ಕಾರ್ಯದರ್ಶಿ ನಿವೃತ್ತ ಶಿಕ್ಷಕ ಜಯರಾಮೇಗೌಡ, ಕಾಂತರಾಜು, ಎನ್.ಜಿ.ವೆಂಕಟೇಶ್, ರಘು, ಎನ್.ರವಿ, ಶಿವಣ್ಣಗೌಡ, ಎನ್.ಎಸ್.ವೆಂಕಟೇಶ್, ನಟೇಶ್ ಸೆರಿದಂತೆ ಹಲವರು ಹಾಜರಿದ್ದರು.