
ಅಥಣಿ :ಎ.13: ತಾಲೂಕಿನ ಅವರಖೋಡ ಗ್ರಾಮದಲ್ಲಿ ಹನುಮಂತ ಪ್ರಕಾಶ್ ಕಾಂಬಳೆ ಎಂಬ ವ್ಯಕ್ತಿ ಅಕ್ರಮವಾಗಿ ಇಟ್ಟು ಮಾರುತ್ತಿದ್ದ ಸುಮಾರು 72,960 ರೂಪಾಯಿ ಕಿಮ್ಮತ್ತಿನ ಒಟ್ಟು 207 ಲೀಟರ್ ನ 24 ಬಾಕ್ಸ್ ಸಾರಾಯಿಯನ್ನು ದಾಳಿ ಮಾಡಿ ಅಥಣಿ ಪೆÇೀಲಿಸರು ವಶಪಡಿಸಿಕೊಂಡಿದ್ದಾರೆ ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ ಹಾಗೂ ಸಿಪಿಐ ರವೀಂದ್ರ ನಾಯ್ಕೋಡಿ ಇವರ ಮಾರ್ಗದರ್ಶನದಲ್ಲಿ ಅಥಣಿ ಪಿಎಸ್‍ಐ ಶಿವಶಂಕರ್ ಮುಕರಿ ಇವರ ನೇತೃತ್ವದ ಈ ದಾಳಿಯಲ್ಲಿ ಹೆಚ್ಚುವರಿ ಪಿಎಸ್‍ಐ ಚಂದ್ರಶೇಖರ ಸಾಗನೂರ ಮತ್ತು ಸಿಬ್ಬಂದಿಗಳಾದ ರಮೇಶ್ ಹಾದಿಮನಿ, ಶ್ರೀಧರ ಬಾಂಗಿ ಮಹಾಂತೇಶ್ ಖೋತ, ರಮೇಶ್ ಕದಮ್ ಇದ್ದರು .ಅಥಣಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.