ಅವನತಿಯೆಡೆ ಸಾಗುತ್ತಿರುವ ವಿಶ್ವ: 3ನೇ ಮಹಾಯುದ್ಧ ತಡೆಗಾಗಿ ಪ್ರಾರ್ಥನೆ

ಕಲಬುರಗಿ,ಜ.22- ವಿಶ್ವವು ಇಂದು ಅತಿವೇಗದಲ್ಲಿ ಅವನತಿಯಡೆ ಸಾಗುತ್ತಿದ್ದು, ಒಂದು ವೇಳೆ ಮೂರನೆ ವಿಶ್ವ ಮಹಾಯುದ್ಧ ಆದಲ್ಲಿ ಮನುಕುಲ ಸೇರಿದಂತೆ ಸೃಷ್ಠಿಯೂ ಸರ್ವನಾಶ ಗೊಳ್ಳಲಿದೆ ಇದನ್ನು ತಡೆಯಲು ನಮ್ಮೆಲ್ಲರಿಗಿಂತಲೂ ಶಕ್ತಿಶಾಲಿಯಾಗಿರುವ ಆ ದೇವನಡೆಗೆ ಬಾಗುವುದಾಗಿದೆ ಎಂದು ಅಹ್ಮದಿಯ ಮಸ್ಲೀಮ ಸಂಘಟನೆಯ ರಾಷ್ಟ್ರೀಯ ಯುವ ಅಧ್ಯಕ್ಷ ಕೆ.ತಾರಿಖ ಅಹ್ಮದ ಸಾಹೇಬರು ಹೇಳಿದರು.
ನಗರದ ತಾರಫೈಲ ರಹಮತ ನಗರದ ಅಹ್ಮದಿಯಾ ಮುಸ್ಲೀಮ ಸಮಾಜದ ಮಿಷನ್ ಹೌಸ್ ನಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಮನುಕುಲಕ್ಕೆ ದೇವನ ಸಂದೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇವನ ಮೇಲಿನ ವಿಶ್ವಾಸ ಅಳಿದು ಹೋಗುತ್ತೀರುವ ಈ ಕಾಲಗಟ್ಟದಲ್ಲಿ ಮನಷ್ಯನು ತನ್ನ ಸ್ವಾರ್ಥ ಪಕ್ಷಪಾತ ಹಾಗೂ ದುರಂಕಾರದ ಪರಿಣಾಮವಾಗಿ ವಿಶ್ವವು ಅವನತಿಯಡೆ ದಾಪುಗಾಲು ಹಾಕುತ್ತಿದೆ. ಒಂದು ವೇಳೆ ವಿಶ್ವ ಮಹಾಯುದ್ಧ ಸಂಭವಿಸಿದ್ದಲ್ಲಿ ಅತ್ಯಾಧುನಿಕ ಅಣು ಅಸ್ತ್ರಗಳ ಬಳಕೆಯಿಂದಾಗಿ ವಿಶ್ವದ ಮುಕ್ಕಾಲು ಭಾಗ ಸರ್ವನಾಶ ಹೊಂದಲಿದೆ ಇದನ್ನು ತಡೆಯಲು ಅಮೇರಿಕಾ, ಯುಕೆ ಲಂಡನ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಅಹ್ಮದಿಯಾ ಮುಸ್ಲೀಮ ಸಮುದಾಯದ 5ನೇ ಖಲೀಫಾರು ಪತ್ರಬರೆದು ಮನವಿ ಮಾಡಿದ್ದಾರೆ. ಯುಕೆ, ಅಮೇರಿಕ ಮತ್ತು ಜರ್ಮನಿ ಸೇರಿದಂತೆ ಕೆಲವು ರಾಷ್ಟ್ರಗಳ ಸಂಸತ್ತಿನಲ್ಲಿ ಈ ಕುರಿತು ಉಪನ್ಯಾಸವನ್ನು ಸಹ ಖಲಿಫಾರು ನೀಡಿದ್ದಾರೆ.
ಭವಿಷ್ಯತ್ತಿನಲ್ಲಿ ಸಂಭವಿಸಲಿರುವ ಹಾನಿಯ ಕುರಿತು ಖಲಿಫಾರು ರಚಿಸಿರುವ “ವಿಶ್ವದ ಬಿಕ್ಕಟ್ಟು ಮತ್ತು ಶಾಂತಿಯ ಮಾರ್ಗಗಳು” ಎಂಬ ಆಂಗ್ಲಭಾಷೆಯ ಅವರ ಕೃತಿಯನ್ನು ವಿವಿಧ ಭಾಷೆಗಳಿಗೆ ಅನುವಾದಿಸಿ ಅವುಗಳನ್ನು ಎಲ್ಲ ರಾಷ್ಟ್ರಗಳ ಪ್ರಮುಖರಿಗೂ, ಗಣ್ಯಮಾನ್ಯರಿಗೂ ಅಹ್ಮದಿಯಾ ಸಮಾಜದ ಮೂಲಕ ದಶಕಗಳ ಮೊದಲೇವಿತರಿಸಲಾಗಿದೆ. ಮರು ಮುದ್ರಣಗೊಂಡು ಇಗಲೂ ವಿತರಿಸುವ ಕಾರ್ಯಮುಂದುವರೆದಿದೆ.
ಭವಿಷ್ಯತ್ತಿನಲ್ಲಿ ಸಂಭವಿಸಲಿರುವ ನಾಶವನ್ನು ತಡೆಯದೇ ಇದ್ದಲ್ಲಿ ವಿಶ್ವವು ಪ್ರಳಯಗೊಂಡು ಇಂದಿನ ಇಂಟರ್ ನೆಟ್, ಸಾರಿಗೆ ಸಂಪರ್ಕ ಸೇರಿದಂತೆ ಅತ್ಯಾಧುನಿಕ ಮೂಲ ಸೌಕರ್ಯಗಳು ಸಂಪೂರ್ಣ ಕಡಿತಗೊಂಡು ಕೇವಲ ಆಹಾರ ಮತ್ತು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ, ಅನಾರೋಗ್ಯ, ಸಾವು ನೋವುಗಳು ನೊಡಲಾಗದ ಸ್ಥತಿ ಬರದಂತೆ ನಿರ್ಮಾಣ ಗೊಳ್ಳದಿರಲೆಂದು ಶಕ್ತಿಶಾಲಿಯಾಗಿರುವ ಆ ದೇವನಡೆಗೆ ನಾವೆಲ್ಲರೂ ಶರಣಾಗಬೇಕಾಗಿದೆ. ಪ್ರಾರ್ಥನೆ ಮತ್ತು ವಿಶ್ವನಾಯಕರಿಗೆ ಹಾನಿಯ ಕುರಿತು ಮನವರಿಕೆ ಮಾಡುವ ಪ್ರಯತ್ನವನ್ನು ಮುಂದುರೆಸಬೇಕು ಈ ಮೂಲಕ ವಿಶ್ವದಲ್ಲಿ ಶಾಂತಿ ನೆಮ್ಮದಿ ಮತ್ತು ನ್ಯಾಯ ಸಮ್ಮತ ಮಾನವೀಯ ನೈತಿಕತೆಯನ್ನು ಬೆಳೆಸಿಕೊಂಡು ನಮಗೆಲ್ಲರಿಗೂ ಆಶ್ರಯ ನೀಡಿದ ಸೃಷ್ಠಿಯನ್ನು ಪ್ರೀತಿಸಿ ಅವುಗಳ ರಕ್ಷಣೆಯ ಹೋಣೆಗಾರಿಕೆಯಿಂದ ವಿಮುಖರಾಗದೇ ನಾವು ಸಲ್ಲಿಸುವುದು ಮಾನವೀಯ ಸೇವೆ ದೇವನಿಗೆ ಅತೀ ಶ್ರೇಷ್ಠ ಹಾಗೂ ಪ್ರೀಯವಾದ ಆರಾಧನೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜದ ನಗರಾಧ್ಯಕ್ಷ ಅಬ್ದುಲ ಖಾದಿರ ಶೆಜ್ಜ ವಹಿಸಿದ್ದರು, ನ್ಯಾಯವಾದಿ ಲಿಯಾಖತ ಫರೀದ ಉಸ್ತಾದ, ವಸೀಮ ಅಹ್ಮದ ನೂರ, ಮಿಷನರಿ ನಸೀರ ಅಹ್ಮದ ಖಾನ, ರಿಜ್ವಾನ್ ಅಹ್ಮದ ಗುಲಬರ್ಗಿ, ಯಾಸರ ನಜೀರ ಖುರೇಶಿ, ಎಂ.ಎನ್ ಹಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು, ಪವಿತ್ರ ಕುರ್‍ಆನ್ ಪಠಣದೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮ ಸಮೂಹಿಕ ಪ್ರಾರ್ಥನೆಯೊಂದಿಗೆ ಸಮಾರೋಪ ಗೊಂಡಿತು.